ಪ್ರಗತಿವಾಹಿನಿ ಸುದ್ದಿ; ಗುವಾಹಟಿ: ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಭಾರಿ ಮಳೆಯಿಂದಾಗಿ ಗುವಾಹಟಿಯ ಬೋರಗಾಂವ್ ನ ನಿಜಾರಪರ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಬೋರಗಾಂವ್ ನಲ್ಲಿ ಮುಂಜಾನೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ಭೂಕುಸಿತದಿಂದಾಗಿ ಮನೆಯೊಂದು ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ನಬನೀತ್ ಮಹಾಂತ್ ಮಾಹಿತಿ ನೀಡಿದ್ದು, ನಾಲ್ವರು ಅವಶೇಷಗಳಡಿಸಿ ಸಿಲುಕಿ ಮೃತಪಟ್ಟಿದ್ದಾರೆ. ರಾತ್ರಿಯಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಭೂಕುಸಿತವುಂಟಾಗಿದೆ.
ನಾಲ್ವರು ಕೂಡ ಕಾರ್ಮಿಕರಾಗಿದ್ದು, ಮುನ್ವರ್ ಹುಸೇನ್, ಮೊಫಿಜುಲ್ ಹೆಕ್, ಅಮರುಲ್ ಹಕ್ ಹಾಗೂ ಅಸನೂರ್ ಅಲಿ ಎಂದು ಗುರುತಿಸಲಾಗಿದೆ. ಇವರು ಕುಸಿದುಬಿದ್ದ ಮನೆಯಲ್ಲಿ ಬಾಡಿಗೆದಾರರಾಗಿದ್ದರು ಎಂದು ತಿಳಿದುಬಂದಿದೆ.
ACB ಅಧಿಕಾರಿಗಳೆಂದು ಬೆದರಿಸಿ ಹಣ ವಸೂಲಿಗಿಳಿದಿದ್ದ ಮೂವರು ಬೆಳಗಾವಿ CEN ಪೊಲೀಸರ ಬಲೆಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ