ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನನ್ನು ವ್ಯಕಿಯೊಬ್ಬ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಸಯ್ಯದ್ ಮುಸ್ತಾಫ್ ಮೃತ ವ್ಯಕ್ತಿ. ಬಾಬಾವಲಿ ಕೊಲೆಗೈದ ಆರೋಪಿ. ಸಯ್ಯದ್ ಎಂಬಾತ ತನ್ನ ಗೆಳೆಯ ಬಾಬಾವಲಿ ಪತ್ನಿಯ ಜತೆಯೇ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ನೇಹಿತನನ್ನು ಕೆಲಸವಿದೆ ಆಂಧ್ರಕ್ಕೆ ಹೋಗಿ ಬರೋಣವೆಂದು ಬಾಬಾಲಿ ಕರೆದೊಯ್ದಿದ್ದ.
ಆಂಧ್ರಪ್ರದೇಶದಿಂದ ವಾಪಸ್ ಆಗುವಾಗ ದಾರಿಯಲ್ಲಿ ಸಯ್ಯದ್ ನನ್ನು ಕತ್ತು ಹಿಸುಕಿ ಹತ್ಯೆ ಮಾಡಿ, ಬಳಿಕ ಮೃತದೇಹವನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನೈತಿಕ ಸಂಬಂಧ; ಮಹಿಳೆ-ಪುರುಷ ಇಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ