Latest

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ: CM ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಕಾನೂನುಬಾಹಿರ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನವರು ಹೋರಾಟ ನಡೆಸುತ್ತಿರುವುದು ದುರಂತ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಿಂದ ರಾಜಭವನ ಚಲೋ ಪ್ರತಿಭಟನೆ ವಿಚಾರವಾಗಿ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರು ಹೋರಾಟ ಮಾಡುತ್ತಿರುವುದು ದುರಂತ. ಹೀಗೆ ಹೋರಾಟ ಮಾಡಿದರೆ ಜನರು ಅವರನ್ನು ಮನೆಗೆ ಚಲೋ ಅಂತಾರೆ ಎಂದು ಹೇಳಿದರು.

*ಹಿಂದುಳಿದ ವರ್ಗಗಳ ಮೀಸಲಾತಿ ವರದಿಯ ಆಧಾರದ ಮೇಲೆ ಕ್ರಮ:*

Home add -Advt

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆ ಬಿಬಿಎಂಪಿ ಚುನಾವಣೆ ಪ್ರಕ್ರಿಯೆಯೂ ಆರಂಭವಾಗಿದೆ, ಪಾಲಿಕೆ ಚುನಾವಣೆ ಬಳಿಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದೆ. ಮೊದಲನೇ ಹಂತದಲ್ಲಿ ಭಕ್ತವತ್ಸಲಂ ಸಮಿತಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೀಸಲಾತಿ ಪ್ರಕ್ರಿಯೆ ನಡೆಸಿದ್ದು, ಇದಾದ ಕೂಡಲೇ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ವರದಿಯ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸೂಚನೆ ನೀಡಿದ್ದೇನೆ. ಆಕ್ಷೇಪಣೆಗಳಿದ್ದರೆ ಹೇಳಬಹುದು ಸಲಹೆ ನೀಡಬಹುದು, ಹಿಂದಿನ ಪಠ್ಯ ಪುಸ್ತಕದ ಬಗ್ಗೆಯೂ ಆಕ್ಷೇಪಣೆಗಳಿವೆ. ಹೀಗಾಗಿ ಯಾವುದನ್ನು ಸರಿಪಡಿಸಬೇಕೊ ಅದನ್ನು ಸರಿಪಡಿಸಿ ಎಂದು ಹೇಳಿದ್ದೇನೆ ಎಂದರು.

ಶಾಲಾ ಮಕ್ಕಳ ಪ್ರವಾಸದಲ್ಲಿ  ಹಿಂದಿ ಭಾಷೆ ಕಡ್ಡಾಯ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂತಹ ನಿರ್ಧಾರ ಯಾವ ಕಾರಣಕ್ಕೂ ಸರಿಯಲ್ಲ. ಇದು ಸರ್ಕಾರದ ನೀತಿ ಅಲ್ಲ. ಯಾವ ಅಧಿಕಾರಿಗಳು ಇಂತಹ ಸುತ್ತೋಲೆ ಹೊರಡಿಸಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

 

ಮೇಕೆದಾಟು ಯೋಜನೆ: ಡಿಪಿಆರ್ ಅನುಮೋದನೆಯಾಗುವ ವಿಶ್ವಾಸ 

ಮೇಕೆ ದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ತನ್ನ ವಾದವನ್ನು ಮಂಡಿಸಿದ್ದು, ಡಿಪಿಆರ್ ಅನುಮೋದನೆಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 

ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ಯಾವುದೇ ತಡೆಯಾಜ್ಞೆ ಇಲ್ಲ. ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ವಿಷಯ ಈಗಾಗಲೇ ಶಿಫಾರಸ್ಸು ಆಗಿ , 15 ಸಭೆಗಳಾಗಿವೆ. ಪ್ರಾಧಿಕಾರಕ್ಕಿರುವ ಅಧಿಕಾರದ ವ್ಯಾಪ್ತಿಯಲ್ಲಿ ಮುಂದಿನ ವಾರ ಸಭೆ ಕರೆಯುವ ಸಾಧ್ಯತೆ ಇದೆ. . ತಮಿಳುನಾಡು ಸರ್ಕಾರ ಹೇಳುವುದರಲ್ಲಿ ಯಾವುದೇ ಕಾನೂನು ಇಲ್ಲ, ಅರ್ಥವೂ ಇಲ್ಲ ಎಂದರು.

  ಕಾಂಗ್ರೆಸ್ ನ ದುರಂತ  –

ಕಾನೂನುಬಾಹಿರವಾಗಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಯ ವಿರುದ್ಧ ಕಾಂಗ್ರೆಸ್ ನವರು ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ಸಿನ ದುರಂತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

*ಪಠ್ಯಪುಸ್ತಕ ಪರಿಷ್ಕರಣೆ* *ಸಲಹೆಗಳಿಗೆ ಮುಕ್ತ ವಾಗಿದ್ದೇವೆ 

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ತಪ್ಪುಗಳನ್ನು ಸರಿಪಡಿಸಲು ಸರ್ಕಾರ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು
ದಾವಣಗೆರೆಯಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ಈಗಾಗಲೇ ಶಿಕ್ಷಣ ಸಚಿವರೊಂದಿಗೆ ಮಾತನಾಡಿ ಸರಿಪಡಿಸಲಾಗುತ್ತಿದೆ. ಸಲಹೆಗಳಿಗೆ ನಾವು ಮುಕ್ತವಾಗಿದ್ದೇವೆ. ಇಲಾಖೆಯ ವೆಬ್ ಸೈಟ್ ನಲ್ಲಿಯೂ ವಿವರಗಳನ್ನು ನೀಡಲಾಗಿದೆ. ಹಿಂದಿನ ಪಠ್ಯಪುಸ್ತಕಗಳ ಬಗ್ಗೆಯೂ ಆಕ್ಷೇಪವಿದೆ. ಪಠ್ಯಪುಸ್ತಕಗಳನ್ನು ಸರಿಪಡಿಸಲು ಸರ್ಕಾರ ಮುಕ್ತವಾಗಿದೆ ಎಂದರು.

ನಡು ರಸ್ತೆಯಲ್ಲೇ ಕುಳಿತ ಮಾಜಿ ಸಿಎಂ; ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರು ವಶಕ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button