Latest

ಮೋದಿ ಅಲೆಯಿಂದ ಗೆಲ್ಲೋದಾದ್ರೆ ಎಲ್ಲರೂ ಗೆಲ್ಲಬೇಕಲ್ವಾ? -ಇದೇನಿದು ಅನಂತಕುಮಾರ ಹೆಗಡೆ ಹೊಸ ವರಸೆ?

ಪ್ರಗತಿವಾಹಿನಿ ಸುದ್ದಿ, ಶಿರಸಿ:
ದೇಶದಾದ್ಯಂತ ಮೋದಿ ಅಲೆ ಇದೆ,  ಅದರಿಂದಲೇ ಬಿಜೆಪಿ ಗೆಲ್ಲೋದು ಅಂತಾದ್ರೆ ದೇಶದ ಎಲ್ಲಾ ಕ್ಷೇತ್ರದಲ್ಲೂ, ನಿಂತಿರುವ ಎಲ್ಲಾ ಅಭ್ಯರ್ಥಿಗಳೂ ಗೆಲ್ಲಬೇಕಿತ್ತಲ್ಲ? ಯಾಕೆ ಅದು ಸಾಧ್ಯವಾಗುತ್ತಿಲ್ಲ?
 ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರ ಪ್ರಶ್ನೆ ಇದು.
ಮೋದಿ ಅಲೆಯಿಂದಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲೋದೇ ಹೊರತು ಇನ್ನಾವುದೇ ಕಾರಣದಿಂದಲ್ಲ ಎಂದು ಹೇಳುವ ವಿರೋಧಿಗಳಿಗೆ ಈ ಮಾತಿನಿಂದ ಹೆಗಡೆ ಟಾಂಗ್ ನೀಡಿದರು.
ಉತ್ತರ ಕನ್ನಡದ ಶಿರಸಿಯಲ್ಲಿ ಸಮಾಲೋಚನಾ ಸಭೆ ನಡೆಸಿದ ಅವರ, ಅನಂತಕುಮಾರ ಹೆಗಡೆ ಮೋದಿ ಹೆಸರಲ್ಲೇ ಮತ ಕೇಳ್ತಾರೆ, ಅವರ ಹೆಸರಲ್ಲೇ ಚುನಾವಣೆ ಮಾಡಿದಾರೆ ಅನ್ನೋರಿಗೆ ಚಾಟಿ ಬೀಸಿದರು. ಮೋದಿ ಅಲೆ ಇದೆ. ಆದ್ರೆ ಅದನ್ನು ಹಿಡಿದಿಡೋರು ಕಾರ್ಯಕರ್ತರು. ಇಲ್ಲದಿದ್ರೆ ಅಲೆ ಬರುತ್ತೆ ಹೋಗುತ್ತೆ ಎಂದು ಮೋದಿ ಅಲೆಯೇ ಬಿಜೆಪಿ ಗೆಲುವಿಗೆ ಕಾರಣ ಅಲ್ಲ ಎಂದು ಪರೋಕ್ಷವಾಗಿ ಹೇಳಿದರು.
 ರಾಜ್ಯದಲ್ಲಿ ನಡೆದ ಎಲ್ಲಾ ಕೊಲೆಗಳಿಗೂ ಎಸ್ ಡಿಪಿಐ ಕಾರಣ, ಉತ್ತರ ಕನ್ನಡದಲ್ಲಿ ಎಸ್ಡಿಪಿಐ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಇದನ್ನು ನಿಯಂತ್ರಿಸಲು ನಾವು ಸಂಘಟನೆ ಮಾಡಬೇಕು. ನಮ್ಮ ಗೆಲುವಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸಹಾ ಸಹಾಯ ಮಾಡಿದೆ. ಅವರನ್ನೂ ಸ್ಮರಿಸಬೇಕು ಎಂದೂ  ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button