Latest

ಕತ್ತಿ ಬುದ್ಧಿ ಇಲ್ಲದ ಅವಿವೇಕಿ; ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ ಹೆಚ್.ಸಿ.ಮಹದೇವಪ್ಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರವಾಗಿ ಮಾತನಾಡಿರುವ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಹೆಚ್.ಸಿ.ಮಹದೇವಪ್ಪ, ಕತ್ತಿ ನನಗೆ ಉತ್ತಮ ಸ್ನೇಹಿತ ಆದರೆ ಅವನೊಮ್ಮ ಬುದ್ಧಿ ಇಲ್ಲದ ಅವಿವೇಕಿ ಮಾಡುವುದಕ್ಕೆ ಕೆಲಸ ಇಲ್ಲದೆ ಏನೇನೋ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕತ್ತಿಗೆ ಮುಖ್ಯಮಂತ್ರಿಯಾಗುವ ಆಸೆ ಇದ್ದರೆ ಇಲ್ಲೇ ಆಗಲಿ. ಅದಕ್ಕಾಗಿ ಏಕೆ ಪ್ರತ್ಯೇಕ ರಾಜ್ಯ ಮಾಡಬೇಕು? ಉತ್ತರ ಕರ್ನಾಟಕ ಅಭಿವೃದ್ಧಿ ಕಂಡಿಲ್ಲ ಎಂದಾದರೆ ಅದರ ಜವಾಬ್ದಾರಿ ಯಾರದ್ದು? ಅರಣ್ಯ ಇಲಾಖೆಯಂತಹ ಮುಖ್ಯವಾದ ಖಾತೆ ನಿರ್ವಹಿಸುತ್ತಿದ್ದರೂ ಕೆಲಸ ಇಲ್ಲದವರಂತೆ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಏನಾಗಿದೆ, ಏನಾಗಿಲ್ಲ ಎಂಬ ಪಟ್ಟಿ ಅವರ ಬಳಿಯೇ ಇದೆ. ಲಕ್ಷಾಂತರ ಜನರ ಹೋರಾಟದ ಫಲವಾಗಿ ಅಖಂದ ಕರ್ನಾಟಕ ನಿರ್ಮಾಣವಾಗಿದೆ. ಅದನ್ನು ಪದೇ ಪದೇ ಒಡೆಯುವ ಮಾತೇಕೆ? ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಬೇಜವಾಬ್ದಾರಿ ಹೇಳಿಕೆ, ಕೂಗು ಶುರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಧವ್ ಠಾಕ್ರೆಗೆ ಖಡಕ್ ಸಂದೇಶ ರವಾನಿಸಿದ ಬಂಡಾಯ ಸಚಿವ ಏಕನಾಥ್ ಶಿಂಧೆ

Home add -Advt

Related Articles

Back to top button