ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೂ ವಾಹನ ಸೌಲಭ್ಯ ಸಿಗಲಿದೆ. ಶಾಲಾ ಮಕ್ಕಳನ್ನು ಕರೆತರಲು ಶಾಲಾ ವಾಹನ ಖರೀದಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಶಾಲಾ ಮಕ್ಕಳ ವಾಹನ ಖರೀದಿಸಲು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವೆಚ್ಚ ಭರಿಸಲು ಆದೇಶದಲ್ಲಿ ಸೂಚಿಸಲಾಗಿದೆ.
ಶಾಲಾ ವಾಹನಕ್ಕೆ ಚಾಲಕರ ವೇತನ ಹಾಗೂ ಪೆಟ್ರೋಲ್/ ಡೀಸೆಲ್ ಮತ್ತು ದುರಸ್ತಿ ವೆಚ್ಚಗಳನ್ನು ಶಾಲಾ ಅಭಿವೃದ್ಧಿ ಹಾಗೂ ಮೆಲುಸ್ತುವಾರಿ ಸಮಿತಿಯು ಇತರೆ ಅನುದಾನದಡಿ ಭರಿಸಬಹುದು ಎಂದು ಷರತ್ತು ವಿಧಿಸಲಾಗಿದೆ.
ಬೆಳಗಾವಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ