ಪ್ರಗತಿವಾಹಿನಿ ಸುದ್ದಿ, ಮೈಸೂರು: ಟಾಲಿವುಡ್ ನಟ ನರೇಶ ಕುಟುಂಬದಲ್ಲಿ ಉಂಟಾದ ಬಿರುಕಿನ ಬಿರುಗಾಳಿ ಈಗ ಮೈಸೂರಿನವರೆಗೂ ಬೀಸಿದೆ.
ಇಲ್ಲಿನ ಹುಣಸೂರು ರಸ್ತೆಯಲ್ಲಿರುವ ಹೋಟೆಲ್ ಒಂದರ ಕೊಠಡಿಯಲ್ಲಿ ತಮ್ಮ ಭಾವೀ ಪತ್ನಿ ಪವಿತ್ರಾ ಲೋಕೇಶ ಜೊತೆ ನರೇಶ ತಂಗಿರುವ ಸುದ್ದಿ ತಿಳಿಯುತ್ತಿದ್ದಂತೆ ಹೋಟೆಲ್ ಗೆ ಆಗಮಿಸಿದ ನರೇಶ ಪತ್ನಿ ರಮ್ಯಾ ಚಂಡಿ ಅವತಾರ ತಳೆದಿದ್ದಾರೆ. ನರೇಶ ಹಾಗೂ ಪವಿತ್ರಾ ಹೋಟೆಲ್ ನಿಂದ ಹೊರಬರುತ್ತಿದ್ದಂತೆ ಇಬ್ಬರ ಮೇಲೂ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ್ದಾರೆ.
ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ರಮ್ಯಾ ಅವರನ್ನು ತಡೆಯುವ ಮೂಲಕ ನರೇಶ ಹಾಗೂ ಪವಿತ್ರಾ ಅವರನ್ನು ಚಪ್ಪಲಿ ಪ್ರಹಾರದಿಂದ ಬಚಾವ್ ಮಾಡಿದ್ದಾರೆ.
ತಮ್ಮನ್ನು ಅವಾಚ್ಯ ಶಬ್ದಗಳಿಂದ ಬೈಯ್ದ ರಮ್ಯಾಗೆ “ನೀನು ಮೋಸಗಾತಿ, ವಂಚಕಿ” ಎಂದೆಲ್ಲ ಬೈಯ್ಯುವ ಮೂಲಕ ನರೇಶ ಕೂಡ ತಮ್ಮ ಆಕ್ರೋಶ ಹೊರಗೆಡವಿದರು.
ಪತಿ, ಪತ್ನಿ, ಔರ್…. ಹಲವು ಗುಟ್ಟುಗಳನ್ನು ಬಿಚ್ಚಿಟ್ಟ ಪವಿತ್ರಾ ಲೋಕೇಶ್ !!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ