Latest

ಫ್ರಿಜ್ ಶಾಕ್ ತಗುಲಿ ಬಾಲಕ ಸಾವು

ಪ್ರಗತಿವಾಹಿನಿ ಸುದ್ದಿ, ಸುಳ್ಯ: ಫ್ರಿಜ್ ಮುಟ್ಟಿದ ಬಾಲಕನೊಬ್ಬ ವಿದ್ಯುತ್ ಶಾಕ್  ತಗುಲಿ ಮೃತಪಟ್ಟಿದ್ದಾನೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಐವರ್ನಾಡಿ ಕೈಯಲ್ ತಡ್ಕ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಕೆಂದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ನಿವಾಸಿ ಹೈದರ್ ಅಲಿ ಹಾಗೂ ಆಪ್ಸಾ ದಂಪತಿಯ ಪುತ್ರ ಆದಿಲ್ (6) ಮೃತಪಟ್ಟ ಬಾಲಕ.

Home add -Advt

ಈತ ತನ್ನ ಅಜ್ಜಿಮನೆಯಾದ  ಕೈಯಲ್ ತಡ್ಕಕ್ಕೆ ಬಂದಿದ್ದು ಮನೆಯಲ್ಲಿದ್ದ ಹಳೆಯ ಫ್ರಿಜ್ ಮುಟ್ಟಿದ ತಕ್ಷಣ ಅದರಿಂದ ಶಾಕ್  ತಗುಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ.  ಆತನ ಎಡಗೈ ಚರ್ಮ ಸಂಪೂರ್ಣ ಕರಕಲಾಗಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಈ ಕುರಿತು ಬಾಲಕನ ತಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಲೇಡಿ ಕಾನ್ಸ್ ಟೇಬಲ್ ಮೇಲೆ ಹಲ್ಲೆ; ಕರ್ನಾಟಕ ಮೂಲದ ನಟಿ ಬಂಧನ

 

Related Articles

Back to top button