ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೆದುಳಿನ ರೋಗದಿಂದ ನರಳುತ್ತಿದ್ದ ಮಹಿಳೆಯ ( ಬ್ರೈನ್ ಬೈಪಾಸ್ ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಸಿದ್ದಗಿರಿ ಆಸ್ಪತ್ರೆಯ ನರರೋಗ ತಜ್ಞ ಡಾ. ಶಿವಶಂಕರ ಮರಜಕ್ಕೆ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತಮಾಡಿದ ಅವರು, ಸಿದ್ಧಗಿರಿ ಸಂಸ್ಥಾನಮಠದ ಆಸ್ಪತ್ರೆಯಲ್ಲಿ ಮಹಿಳೆಯ ಬ್ರೇನ್ ಬೈಪಾಸ್ ಸರ್ಜರಿಯನ್ನು ಯಶಸ್ಚಿಯಾಗಿ ಮಾಡಲಾಗಿದೆ. ಮೆದುಳಿನಲ್ಲಿ ಬೆಳೆದಿದ್ದ ಗಂಟನ್ನು ರಕ್ತನಾಳದ ಎರಡೂ ಬದಿಗಳಿಂದ ಕತ್ತರಿಸಿ ತೆಗೆದುಹಾಕಲಾಗಿದೆ. ಸುಮಾರು 11 ಗಂಟೆಗಳಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ ಅರವಳಿಕೆ ತಜ್ಞ ಡಾ. ಪ್ರಕಾಶ ಭರಮಗೊಂಡರ, ಹೃದಯ ರೋಗ ತಜ್ಞ ಡಾ. ಅಮೋಲ್ಬ ಬೋಜೆ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಈ ಚಿಕಿತ್ಸೆ ನಡೆಸಲಾಯಿತು ಎಂದರು.
ಸಿದ್ದಗಿರಿ ಆಸ್ಪತ್ರೆಯ ಮೆದುಳಿನ ಆಪರೇಷನ್ ನಲ್ಲಿ ಸುಮಾರು 5 ರಿಂದ 6 ಕೋಟಿ ರೂ. ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಉಪಕರಗಳು ಲಭ್ಯವಿವೆ. ಮೆದುಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳ ಜತಗೆ ನರರೋಗ ಕಾಯಿಲೆಗಳು, ಕಿಡ್ನಿ, ಹೃದಯ ರೋಗ, ಕ್ಯಾನ್ಸರ್, ಎಲುಬು, ಕೀಲು, ಕಣ್ಣು ಮತ್ತು ಸ್ತ್ರೀ ರೋಗಗಳಿಗೂ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಯನ್ನು ಸಹ ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ ಅಪಸ್ಮಾರ ಕಾಯಿಲೆಗೆ ಶಸ್ತ್ರಚಿಕಿತ್ಸೆ ನೀಡುವ ಆಸ್ಪತ್ರೆಗಳು ಕೇವಲ 10 ಇವೆ. ಅದರಲ್ಲಿ ಸಿದ್ದಗಿರಿ ಆಸ್ಪತ್ರೆಯೂ ಒಂದಾಗಿದೆ. ಸಿದ್ದಗಿರಿ ಆಸ್ಪತ್ರೆ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ನೀಡುತ್ತಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೃಹತ್ ಐಸಿಐ ಕೇಂದ್ರವನ್ನು ಆಸ್ಪತ್ರೆ ಹೊಂದಿದೆ ಎಂದರು.
ಕನೇರಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ, ಡಾ.ಪ್ರಕಾಶ ಭರಮಗೊಂಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಾ. ಸೋನಾಲಿ ಸರ್ನೋಬತ್ ಜನ್ಮದಿನ ನಿಮಿತ್ತ ಉಚಿತ ನೇತ್ರ ತಪಾಸಣೆ ಶಿಬಿರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ