Kannada NewsLatest

ಕೆ.ಜೆ.ಸೋಮಯ್ಯ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಅಗ್ರಿಕಲ್ಚರಲ್ ರಿಸರ್ಚ್ ನೊಂದಿಗೆ ಕೆಎಲ್ಎಸ್ ಜಿಐಟಿಯ ಒಡಂಬಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮೀರವಾಡಿಯ ಕೆಎಲ್‌ಎಸ್ ಜಿಐಟಿಯು  ಕೆ.ಜೆ. ಸೋಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಅಗ್ರಿಕಲ್ಚರಲ್ ರಿಸರ್ಚ್ ( ಕೆಐಎಎಆರ್) ನೊಂದಿಗೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಎರಡೂ ಸಂಸ್ಥೆಗಳ ನಡುವೆ ಉತ್ತಮ ಕಾರ್ಯವಿಧಾನವನ್ನು ನಿರ್ಮಿಸುವುದು ಮತ್ತು ಇದರಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಸಂಸ್ಥೆಗಳ ಅಗತ್ಯತೆಗಳು ಮತ್ತು ಅವಕಾಶಗಳನ್ನು ಬಳಸಿ, ಕಬ್ಬು ಬೆಳೆಯುವ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ.

ಎರಡೂ ಸಂಸ್ಥೆಗಳು ಜಂಟಿಯಾಗಿ, ಶೈಕ್ಷಣಿಕ ಮತ್ತು ತಾಂತ್ರಿಕ ಸಹಕಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ವಿವಿಧ ಕ್ರಿಯಾಯೋಜನೆಗಳಾದ ವಿದ್ಯಾರ್ಥಿ/ಅಧ್ಯಾಪಕರ ಪ್ರಾಜೆಕ್ಟ್ ಗಳು, ತರಬೇತಿಗಳು, ಕಬ್ಬು ಬೆಳೆಯುವ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್, ನ್ಯಾನೋ ರಸಗೊಬ್ಬರಗಳು/ಗೊಬ್ಬರ ಶ್ರೇಣಿಗಳ ತಯಾರಿಕೆ, ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ತಂತ್ರಗಳು, ಕಬ್ಬಿನ ಸಕ್ಕರೆ ಹೆಚ್ಚಿಸುವ ತಂತ್ರಗಳು, ಬಯೋಚಾರ್‌ಗಾಗಿ ನ್ಯಾನೊ ತಂತ್ರಗಳು. , ಬ್ರಿಕ್ವೆಟ್‌ಗಳು, ಕಣಗಳು ಅಥವಾ ರಸಗೊಬ್ಬರ ಪೋಷಕಾಂಶಗಳ ಮಾತ್ರೆಗಳ ತಯಾರಿಕೆ,  ಹಾಗೂ ಎರಡೂ ಸಂಸ್ಥೆಗಳು ಜಂಟಿಯಾಗಿ ಅನುದಾನಸಹಿತ ಯೋಜನೆಗಳನ್ನು ತೆಗೆದುಕೊಳ್ಳಬಹುದಾಗಿದೆ.

ಕೆಎಲ್‌ಎಸ್ ಜಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಹಾಗೂ ಕೆಐಎಎಆರ್ ನಿರ್ದೇಶಕ ಡಾ. ಅಶೋಕ್ ಕಡ್ಲಗ್, ಒಡಂಬಡಿಕೆ ಗೆ ಸಹಿ ಹಾಕಿದರು.

ಗೋದಾವರಿ ಬಯೋ ರಿಫೈನರೀಸ್‌ನ ಡಾ. ರಮೇಶ ಶೆಟ್ಟರ್, ಕೆಎಲ್‌ಎಸ್ ಜಿಐಟಿಯ ಆಡಳಿತ ಮಂಡಳಿ ಸದಸ್ಯರಾದ  ರಾಮ ಭಂಡಾರೆ ಮತ್ತು  ವಿವೇಕ್ ಕುಲಕರ್ಣಿ, ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲ  ಡಾ.ಜಯಂತ್ ಕೆ.ಕಿತ್ತೂರು, ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ. ರವಿರಾಜ್ ಎಂ.ಕುಲಕರ್ಣಿ ಉಪಸ್ಥಿತರಿದ್ದರು.

ಮೀಸಲಾತಿ ವಿಚಾರ ಕಾನೂನಾತ್ಮಕವಾಗಿ ಕ್ಲಿಷ್ಟಕರ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿದ ಕೇದಾರ ಪೀಠದ ಜಗದ್ಗುರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button