ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುನೈಟೆಡ್ ಸೈನ್ಸ್ ಆಫ್ ಮಲೇಶಿಯಾದ ಸ್ಕೂಲ್ ಆಫ್ ಮೆಡಿಕಲ್ ಸೈನ್ಸ್ ಮುಖ್ಯಸ್ಥ ಡಾ. ಅಬ್ದುಲ್ ರಜಾಕ್ ಬಿನ್ ಸುಲೈಮಾನ್ ಹಾಗೂ ಅವರ ತಂಡ ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಬ್ದುಲ್ ರಜಾಕ್ ಬಿನ್ ಸುಲೈಮಾನ್, ಅಂತಾರಾಷ್ಟ್ರೀಯ ಮಟ್ಟದ ಸೇವೆಗಳನ್ನು ಬೆಳಗಾವಿ ಹಾಗೂ ಸುತ್ತಮುತ್ತಲ ನಾಗರಿಕರಿಗೆ ನೀಡುತ್ತಿರುವ ಕೆಎಲ್ಇ ಸಂಸ್ಥೆ ನಿಜಕ್ಕೂ ರಾಜ್ಯವಷ್ಟೇ ಅಲ್ಲ, ದೇಶಕ್ಕೇ ಒಂದು ಕೀರ್ತಿಯ ಗರಿಯಾಗಿದೆ. ಅತ್ಯುನ್ನತ ಮಟ್ಟದ ಯಂತ್ರೋಪಕರಣಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಸೇವೆಗಳನ್ನು ಸಾರ್ವಜನಿಕರಿಗೆ ಕೈಗೆಟುಕುವ ರೀತಿಯಲ್ಲಿ ನೀಡುತ್ತಿರುವುದು ನಿಜಕ್ಕೂ ಮಾದರಿಯಾಗಿದೆ. ಇಲ್ಲಿನ ಮಾದರಿ ಸೇವೆ ಮುಂದಿನ ಯುವ ವೈದ್ಯರಿಗೆ ಉತ್ತಮ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಗೆ ಭೇಟಿ ನೀಡಿದ ಯುನೈಟೆಡ್ ಸೈನ್ಸ್ ಆಫ್ ಮಲೇಶಿಯಾದ ಸ್ಕೂಲ್ ಆಫ್ ಮೆಡಿಕಲ್ ಸೈನ್ಸ್ ನ ಇನ್ನಿತರ ಡಾ. ಎನ್ ಸಮತ, ಡಾ. ಮಹಮ್ಮದ್ ಸಬ್ರಿ ಸೇದ್, ಡಾ. ಕಮರುಲ್, ಡಾ. ನೊರ್ಮಲಾ ವಹೀದ್, ಡಾ. ಅಜಲಿಂಡಾ ಅಜ್ಮಲ್ ಮುಂತಾದವರು ಭೇಟಿ ನೀಡಿದ ನಿಯೋಗದಲ್ಲಿದ್ದರು.
ಅವರಿಗೆ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಅಶೋಕ ಪಾಂಗಿ, ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್.ಸಿ. ಧಾರವಾಡ ಹಾಗೂ ಯುಎಸ್ಎಂ ಕೆಎಲ್ಇ ನಿರ್ದೇಶಕ ಡಾ. ಎಚ್. ಬಿ. ರಾಜಶೇಖರ ಅವರು ಆಸ್ಪತ್ರೆಯ ಬಗ್ಗೆ ವಿವರಣೆ ನೀಡಿದರು.
ನಾಳೆ ಪಂಜಾಬ್ ಸಿಎಂ ಭಗವಂತ್ ಮಾನ್ ಮದುವೆ; 2ನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಮುಖ್ಯಮಂತ್ರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ