Latest

ಕೆಎಲ್‌ಎಸ್  ಜಿಐಟಿಯಲ್ಲಿ  ಪ್ರಾಜೆಕ್ಟ್ ಎಕ್ಸ್‌ಪೋ;  200ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳ ಪ್ರದರ್ಶನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಪ್ರಾಜೆಕ್ಟಗಳ ಪ್ರದರ್ಶನ  ಪ್ರಾಜೆಕ್ಟ್ ಎಕ್ಸ್‌ಪೋ-2022  ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಬೆಳಗಾವಿಯ ಡಿಐಸಿ ಜಂಟಿ ನಿರ್ದೇಶಕ  ಶಿವಪುತ್ರಪ್ಪ ಆರ್.ಎಚ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Home add -Advt

ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸಿದ ಅವರು, ಕರ್ನಾಟಕ ಸರ್ಕಾರದಿಂದ ಉದ್ಯೋಗಿ- ಉದ್ಯೋಗದಾತರ ಕಾರ್ಯಕ್ರಮಕ್ಕಾಗಿ ತರಬೇತಿ ನೀಡಲು ಜಿಐಟಿಯನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಇದರ ಅಡಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳು , ಕೈಗಾರಿಕೆಗಳ ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಉತ್ಪನ್ನಗಳನ್ನು ಸ್ಟಾರ್ಟ್‌ಅಪ್‌ಗಳಾಗಿ ನೋಂದಾಯಿಸಲು  ಅವರು ಸಲಹೆ ನೀಡಿದರು.

ಬೆಳಗಾವಿ ಮತ್ತು ಸುತ್ತಮುತ್ತಲಿನ 40 ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಪ್ರಾಜೆಕ್ಟ್ ಎಕ್ಸ್‌ಪೋ ಭೇಟಿ ನೀಡಿದರು.

ಎಂಜಿನಿಯರಿಂಗ್ ವಿಭಾಗದಿಂದ ಪ್ರೊ. ಪಿ ವಿ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ವೈಷ್ಣವಿ ಗೋವಿಂದ್ ಕೌರಿ, ವೈಷ್ಣವಿ ಕೆ., ವಾಸುದೇವ್ ಆರ್., ಸುಮಂತ್ ಆರ್. ಜಿ. ಅಭಿವೃದ್ಧಿಪಡಿಸಿದ ‘ಹೈಬ್ರಿಡ್ 3D ಪ್ರಿಂಟರ್ ವಿನ್ಯಾಸ ಮತ್ತು ಅಭಿವೃದ್ಧಿ’  ಹಾಗೂ ಪ್ರೊ. ಶ್ರೀನಿವಾಸ ಗೊಂಬಿ ಅವರ ಮಾರ್ಗದರ್ಶನದಲ್ಲಿ ಯೋಗೇಶ್ ವೈ ಬಿ, ಸುದರ್ಶನ ಕೆ ಪಾಟೀಲ್, ರಾಹುಲ್ ಶರ್ಮಾ  ಅಭಿವೃದ್ಧಿಪಡಿಸಿದ ‘ದೃ ಷ್ಟಿ ವಿಕಲಚೇತನರಿಗೆ ಸ್ಮಾರ್ಟ್ ಸ್ಟಿಕ್’ ಎಂಬ ಶೀರ್ಷಿಕೆಯ ಯೋಜನೆಗಳನ್ನು ಅತ್ಯುತ್ತಮ ಯೋಜನೆಗಳಾಗಿ ಆಯ್ಕೆ ಮಾಡಲಾಯಿತು.

ವಾಸ್ತುಶಿಲ್ಪ ವಿಭಾಗದಿಂದ ಪ್ರೊ. ಪವನಿಕಾ ಪಾಟೀಲ ಮಾರ್ಗದರ್ಶನದಲ್ಲಿ ಉಪೇಂದ್ರ ಆರ್. ಶಾನಭಾಗ ಅಭಿವೃದ್ಧಿಪಡಿಸಿದ ‘ಎಫಿಮೆರಲ್ ಆರ್ಕಿಟೆಕ್ಚರ್’ ಶೀರ್ಷಿಕೆಯ ಯೋಜನೆಯನ್ನು ಅತ್ಯುತ್ತಮ ಯೋಜನೆಯಾಗಿ ಆಯ್ಕೆ ಮಾಡಲಾಯಿತು.

ಡಿಪ್ಲೊಮಾ ಮತ್ತು ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು  ಪ್ರಾಜೆಕ್ಟ್ ಎಕ್ಸ್‌ಪೋಗೆ ಸಾಕ್ಷಿಯಾದರು. ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲ ಡಾ.ಜಯಂತ್ ಕೆ.ಕಿತ್ತೂರ ವಂದಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಪ್ರಮಾಣವಚನ ಸ್ವೀಕಾರ

Related Articles

Back to top button