Kannada NewsKarnataka NewsLatest

ವಿಶ್ವ ಕರಾಟೆ ಜ್ಯೂನಿಯರ್ ಚಾಂಪಿಯನ್ ಶಿಪ್ ಸ್ಪರ್ಧೆಗೆ ಶ್ರೇಯಸ್ ಯಾದವಾಡ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಪಾನಿನ ಓಕಿನೊವಾದಲ್ಲಿ ಬರುವ  ಆಗಸ್ಟ್ ಮೊದಲವಾರದಲ್ಲಿ ಜರುಗಲಿರುವ ಪ್ರಥಮ ಓಕಿನೊವಾ ವಲ್ಡ್೯ ಜ್ಯೂನಿಯರ್ ಕರಾಟೆ ಟೂರ್ನಾಮೆಂಟ್ ಗೆ ಅಥಣಿ ಮೂಲದ ಶ್ರೇಯಸ್ ವೀರಭದ್ರ ಯಾದವಾಡ ಆಯ್ಕೆಯಾಗಿದ್ದಾನೆ.

ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ವಿಶ್ವ ಕರಾಟೆ ಸ್ಪರ್ಧೆಯು, ಕರಾಟೆ ಹುಟ್ಟಿದ ಸ್ಥಳ ಓಕಿನೊವಾದಲ್ಲಿ ಪ್ರಥಮ ಬಾರಿಗೆ ಇದೇ ಆಗಸ್ಟ್ 1 ರಂದು ಪ್ರಾರಂಭವಾಗುವುದು. ಇದನ್ನು ಪಾರಂಪರಿಕವಾಗಿ ಕರಾಟೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಆಯೋಜಿಸಲಾಗಿದೆ.

ಶ್ರೇಯಸ್ ಯಾದವಾಡ ಈತನು ಬೆಂಗಳೂರಿನ ಒಎಸ್ ಕೆ  ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದು , ಈಗಾಗಲೇ ಜ್ಯೂನಿಯರ್ ವಿಭಾಗದಲ್ಲಿ ನಾಲ್ಕು ರಾಷ್ಟ್ರ ಮಟ್ಟದ ಪದಕಗಳು ಹಾಗೂ ಒಂದು ಅಂತರಾಷ್ಟ್ರೀಯ ಮಟ್ಟದ ಪದಕ ಪಡೆದಿದ್ದಾನೆ.

1) 2019 ರಲ್ಲಿ ನಡೆದ ರಿಪಬ್ಲಿಕ್ ಕಪ್  ಕೆಐಎಐ ನ್ಯಾಶನಲ್ ಲೇವಲ್ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆಯ ಟೀಮ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಹಾಗೂ 8ವರುಷದೊಳಗಿನ 25 ರಿಂದ 30 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾನೆ.

2) 2020 ರಲ್ಲಿ ನಡೆದ ನ್ಯಾಶನಲ್ ರಿಪಬ್ಲಿಕ್ ಡೇ ಕಪ್ ನ್ಯಾಶನಲ್ ಲೇವಲ್ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ.

3) 2021 ರಲ್ಲಿ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಬ್ರೌನ ಬೆಲ್ಟ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ.

4) 2022 ಜನವರಿಯಲ್ಲಿ ನಡೆದ ರಿಪಬ್ಲಿಕ್ ಡೇ ಕಪ್ ನ್ಯಾಶನಲ್ ಲೇವಲ್ ಕರಾಟೆ ಸ್ಪರ್ಧೆಯಲ್ಲಿ ಬ್ರೌನ್ ಬೆಲ್ಟ್ 12 ವರ್ಷದೊಳಗಿನವರ  ವೈಯಕ್ತಿಕ ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದ್ದಾನೆ.

ಒಎಸ್ ಕೆ ಫೆಡರೇಶನ್ ಆಫ್ ಇಂಡಿಯನ್ ಮುಖ್ಯಸ್ಥ ಸಿಯಾನ್ ಸುರೇಶ ಕೆನಿಚಿರಾ ಅವರ ಮಾರ್ಗದರ್ಶನದಲ್ಲಿ, ಕಿರಣ ಎಂ. ಅವರ ನಿತ್ಯ ತರಬೇತಿಯಲ್ಲಿ ಶ್ರೇಯಸ್ ಯಾದವಾಡ ವಿಶ್ವ ಚಾಂಪಿಯನ್ ಶಿಫ್ ಗೆ ಸನ್ನದ್ಧನಾಗುತ್ತಿದ್ದಾನೆ. ಈ ಸಂಸ್ಥೆಯು ಮೂರು ದಶಕಗಳ ಇತಿಹಾಸ ಹೊಂದಿದ್ದು , 25 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತ ಬಂದಿದ್ದಾರೆ.

ಇದೇ ಜುಲೈ ಕೊನೆಯ ವಾರದಲ್ಲಿ  ಒಎಸ್ ಕೆ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಸಿಯಾನ್ ಸುರೇಶ ಕೆನಿಚಿರಾ ಅವರ ನೇತೃತ್ವದಲ್ಲಿ ತಂಡವು ಜಪಾನಿನ ಓಕಿನೊವಾಕ್ಕೆ ಪ್ರಯಾಣ ಬೆಳೆಸಲಿದೆ.

ಶ್ರೇಯಸ್ ಮೂಲತಃ ಅಥಣಿಯ ಹಿರಿಯ ಪತ್ರಕರ್ತ ಶಿವಪುತ್ರ ಯಾದವಾಡರ ಮೊಮ್ಮಗನಾಗಿದ್ದು, ಜಪಾನಿನ ಯೊಕೊಗೋವಾ ಅಂತಾರಾಷ್ಟ್ರೀಯ ಕಂಪನಿ ಉದ್ಯೋಗಿ ಬೆಂಗಳೂರಿನ ವೀರಭದ್ರ ಯಾದವಾಡ ಇವರ ಪುತ್ರನಾಗಿದ್ದು, ಸದ್ಯ ಬೆಂಗಳೂರಿನ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾನೆ.

ಅಥಣಿ ತಾಲೂಕಿನಲ್ಲಿ ಲಘು ಭೂಕಂಪ; ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button