Kannada NewsKarnataka NewsLatest

ಮೂಲ ವೃಂದಾವನ ಕುರಿತಂತೆ ವಿವಾದ ಬೇಡ : ಪಂ. ಪ್ರಮೋದಾಚಾರ್ಯ ಕಟ್ಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀ ಜಯತೀರ್ಥರ ಮೂಲ ವೃಂದಾವನ ಕುರಿತಂತೆ ರಾಯರ ಮಠದವರು ಮಾಡುತ್ತಿರುವ ಅಪಪ್ರಚಾರವನ್ನು ವಿರೋಧಿಸಿ ಬೆಳಗಾವಿಯ ಶ್ರೀ ಜಯತೀರ್ಥರ ಭಕ್ತರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ  ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ  ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಂ. ಪ್ರಮೋದಾಚಾರ್ಯ ಕಟ್ಟಿಯವರು ಪತ್ರಕರ್ತರೊಂದಿಗೆ ಮಾತನಾಡಿ, ಶ್ರೀ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೆಲ್ಲ ಗೊತ್ತಿದ್ದರೂ ವಿವಾದಕ್ಕೇಕೆ ಎಳೆದು ತರುತ್ತಾರೋ ಗೊತ್ತಾಗುತ್ತಿಲ್ಲ. ಸುಮ್ಮನೇ ವಿವಾದ ಮಾಡುವುದನ್ನು ಕೈಬಿಟ್ಟು ಇತಿಹಾಸವನ್ನು ತಿರುಚುವ ಕೆಲಸವನ್ನು ರಾಯರಮಠದವರು ಮಾಡಬಾರದು ಎಂದು ಹೇಳಿದರು.

ಮಳಖೇಡ ವಿಷಯದಲ್ಲಿ ಅನಗತ್ಯ ವಿವಾದ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ. ಇದು ಸರ್ವಥಾ ಸರಿಯಲ್ಲ. ಮಾಧ್ವ ಸಮಾಜದ ಮಹಾನ್ ಯತಿಗಳು ಮಳಖೇಡದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಿದ್ದರೂ ವಿವಾದ ಎಬ್ಬಿಸುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಯಾವುದೇ ಇತಿಹಾಸವನ್ನು ಸುಳ್ಳಿನಿಂದ ಸತ್ಯ ಮಾಡಲು ಸಾಧ್ಯವಿಲ್ಲ. ವಿವಾದ ಇನ್ನಷ್ಟು ಗಂಭೀರ ಸ್ವರೂಪ ಪಡೆಯುವ ಮೊದಲೇ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಎಂದರು.

ಪಂ. ಸಮೀರಣಾಚಾರ್ಯ ಪಾಂಗ್ರಿ  ಮಾತನಾಡಿದರು. ಈ ಸಂದರ್ಭದಲ್ಲಿ ಪಂ. ಶ್ರೀನಿಧಿ ಆಚಾರ್ಯ, ಪಂ. ಸಮೀರಣಾಚಾರ್ಯ ಜೋಶಿ, ನಗರ ಸೇವಕ ಜಯತೀರ್ಥ ಸವದತ್ತಿ, ಶ್ರೀಧರ ಹುಕ್ಕೇರಿ, ಶ್ರೀನಿವಾಸ ಶಿವಣಗಿ, ಮಾಧವ ಹುಕ್ಕೇರಿ, ಅಚ್ಯುತ ಪ್ರಯಾಗ, ಮಧುಸೂದನ ಭುಕ್ಕೆಬಾಗ, ರಾಜೇಂದ್ರ ಕುಲಕರ್ಣಿ, ಭೀಮಸೇನ ಮಿರ್ಜಿ, ಎಲ್ಲ ಭಜನಾ ಮಂಡಳಿ ಸದಸ್ಯರು, ವಿಪ್ರವೇದಿಕೆ ಸದಸ್ಯರು ಉಪಸ್ಥಿತರಿದ್ದರು.
ಡಿ.ಕೆ.ಶಿವಕುಮಾರ ಜೊತೆ ಹೆಬ್ಬಾಳಕರ್, ಚನ್ನರಾಜ, ಹುಕ್ಕೇರಿ ಚರ್ಚೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button