ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಧಾರಾಕಾರ ಮಳೆಯಿಂದಾಗಿ ತಾಲೂಕಿನ ಗರ್ಲಗುಂಜಿಯ ಸರಕಾರಿ ಮರಾಠಿ ಶಾಲೆಯ ಹಳೆಯ ಕಟ್ಟಡದ ಕೊಠಡಿ ಸಂಪೂರ್ಣ ನೆಲಕ್ಕುರುಳಿದೆ.
ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಕಳೆದ ಕೆಲವು ದಿನಗಳಿಂದ ಇದರಲ್ಲಿ ಪಾಠ ಮಾಡುತ್ತಿರಲಿಲ್ಲ. ಹಾಗಾಗಿ ಭಾರಿ ಅನಾಹುತ ತಪ್ಪಿದೆ. ಕೊಠಡಿ ರಾತ್ರಿ ವೇಳೆಯಲ್ಲಿ ನೆಲಕ್ಕುರುಳಿದೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಶಾಲೆಯ ಗೋಡೆ ಕುಸಿದು ಕಟ್ಟಡ ನೆಲಕ್ಕುರುಳಿದೆ. ಇದು ಶಾಲೆಯ ಹಳೆಯ ಕಟ್ಟಡವಾಗಿದ್ದು, ಸಂಪೂರ್ಣ ಶಿಥಿಲವಾಗಿತ್ತು.
ಮಕ್ಕಳ ಸಂಖ್ಯೆ ಹೆಚ್ಚಿದ್ದಾಗ ಮಾತ್ರ ಈ ಕಟ್ಟಡವನ್ನು ಬಳಸಲಾಗುತ್ತಿತ್ತು. ಆದರೆ ಈಚೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಈ ಕೊಠಡಿಯನ್ನು ಬಳಸುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಯಾವುದೇ ತೊಂದರೆಯಾಗಲಿಲ್ಲ. ಶಾಲಾ ದಿನಗಳಾಗಿದ್ದರೆ ಮಕ್ಕಳು ಅಲ್ಲಿ ಆಟವಾಡುವ ಸಾಧ್ಯತೆಯೂ ಇತ್ತು.
ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಗುಡ್ಡಕುಸಿತ; ಹೊರನಾಡು-ಶೃಂಗೇರಿ ಮಾರ್ಗ ಸ್ಥಗಿತ; ಆಗುಂಬೆ ಘಾಟ್ ನಲ್ಲಿಯೂ ಭೂಕುಸಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ