Kannada NewsLatest

ಜುಲೈ 16ರಂದು ಬೆಳಗಾವಿಯಲ್ಲಿ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ 78 ನೇ ಸ್ಮೃತಿ ಸಂಗೀತೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಧಾರವಾಡದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ  ಬೆಂಗಳೂರಿನ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ  ಜುಲೈ 16ರಂದು ರಂದು ಸಂಜೆ 5.30ಕ್ಕೆ ಬೆಳಗಾವಿಯ ವಡಗಾವಿ ಆದರ್ಶನಗರದ ಐಎಂಇಆರ್ ಕಾಲೇಜು ಸಭಾಭವನದಲ್ಲಿ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ 78 ನೇ  ಸ್ಮೃತಿ ಸಂಗೀತೋತ್ಸವವನ್ನು  ಆಯೋಜಿಸಿದೆ.

ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ  ಜಗದ್ದುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.  ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಅಧ್ಯಕ್ಷತೆ ವಹಿಸವರು.  ಮುಖ್ಯ ಅತಿಥಿಯಾಗಿ   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಭಾಗವಹಿಸುವರು.  ಪ್ರತಿಷ್ಠಾನದ ಅಧ್ಯಕ್ಷ ಮಹಾಬಳೇಶ್ವರ ಹಾಸಿನಾಳ, ಉಪಾಧ್ಯಕ್ಷ ಶಂಕರ ಕುಂಬಿ, ಕೋಶಾಧ್ಯಕ್ಷ ಪಂ.ಡಿ.ಕುಮಾರದಾಸ್ ಹಾಗೂ ಸದಸ್ಯರು ಉಪಸ್ಥಿತರಿರುವರು.

ಸಂಗೀತೋತ್ಸವದಲ್ಲಿ ಪಂ.ಬಿ.ಎಸ್.ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ಅವರ ವಯೋಲಿನ್ ಜುಗಲಬಂದಿಗೆ ಹಿರಿಯ ತಬಲಾ ವಾದಕ  ನಿಸಾರ ಅಹಮದ್ ತಬಲಾ ಸಾಥ್  ನೀಡುವರು. ವೀಣಾ ಶಿವಾನಂದ ವಯೋಲಿನ್ ಸಹವಾದನದಲ್ಲಿರುವರು.  ಐಶ್ವರ್ಯ ದೇಸಾಯಿ ಅವರ ಗಾಯನಕ್ಕೆ ತಬಲಾದಲ್ಲಿ ಕೇಶವ ಜೋಶಿ ಬೆಂಗಳೂರು ಹಾಗೂ ಸಂವಾದಿನಿಯಲ್ಲಿ ಬೆಳಗಾವಿಯ ಶ್ರೀ ಸಾರಂಗ ಕುಲಕರ್ಣಿ ಸಾಥ್  ನೀಡಲಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ, ಹಿರಿಯ ಹಿಂದೂಸ್ಥಾನಿ ಗಾಯಕ ಡಾ. ಎಂ.ವೆಂಕಟೇಶಕುಮಾರ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ಸಂಸತ್ ಭವನದಲ್ಲಿ ಕಂಚಿನ ರಾಷ್ಟ್ರೀಯ ಲಾಂಛನ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button