ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂರಕ್ಕಿಂತ ಹೆಚ್ಚು ಹಲ್ಲುಗಳನ್ನು ಕಳೆದುಕೊಂಡಿರುವ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ದಂತ ಪಂಕ್ತಿ ನೀಡುವ ದಂತ ಭಾಗ್ಯ ಸಪ್ತಾಹವನ್ನು ಕೆಎಲ್ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಡಾ. ದೀಪಾ ಮಗ್ದುಮ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಅತಿಥಿಯಾಗಿ ಹಿರೇಬಾಗೆವಾಡಿಯ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ದಂತ ಆರೋಗ್ಯ ಅಧಿಕಾರಿ ಡಾ. ಚಂದ್ರಾ ನಾಯಕ್ ಪಾಲ್ಗೊಂಡಿದ್ದರು.
ದಂತ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಅಲ್ಕಾ ಕಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಿದ್ಯಾಲಯ ಸರ್ಕಾರದ ಜೊತೆಗೊಡಿ ಅನೇಕ ಯೋಜನೆಗಳನ್ನ ಹಮ್ಮಿಕೊಳ್ಳುತ್ತಿರುತ್ತದೆ. ಅವಶ್ಯವಿರುವವರು ಇದರ ನೆರವು ಪಡೆದು ಸಹಕರಿಸಬೇಕು, ಕೆ.ಎಲ್.ಇ ಸಂಸ್ಥೆ ಯಾವತ್ತು ಜನಪರ ಆರೋಗ್ಯದ ಕಡೆ ಗಮನಕೊಡುತ್ತಿದೆ ಎಂದರು.
ರಾಷ್ಟ್ರೀಯ ಕಾರ್ಯಕ್ರಮದಡಿ ದಂತ ಭಾಗ್ಯ ಸಪ್ತಾಹ ಜುಲೈ 11 ರಿಂದ ಆರಂಭಗೊಂಡಿದ್ದು 16 ರವರೆಗೆ ನಡೆಯಲಿದೆ. ಬಿಪಿಎಲ್ ಕಾರ್ಡುದಾರರು ಮೂರಕ್ಕಿಂತ ಹೆಚ್ಚು ದಂತಗಳನ್ನು ಕಳೆದುಕೊಂಡಿದ್ದಲ್ಲಿ ಅಂತಹವರು ಉಚಿತವಾಗಿ ದಂತ ಪಂಕ್ತಿಯನ್ನು ಪಡೆಯಲು ಸಪ್ತಾಹದ ಅವಧಿಯಲ್ಲಿ ತಮ್ಮ ಹೆಸರನ್ನು ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ನೊಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯೆ ಡಾ. ಅಂಜನ ಬಾಗೇವಾಡಿ, ಡೀನ್ ಡಾ. ಸೋನಲ್ ಜೋಷಿ, ಹಾಗೂ ಕೃತಕ ದಂತ ವಿಭಾಗದ ಮುಖ್ಯಸ್ಥ ಡಾ.ಆನಂದಕುಮಾರ ಜಿ.ಪಾಟೀಲ್ ಮತ್ತು ಡಾ.ಮಲ್ಲಿಕಾರ್ಜುನ ದೊಡ್ಡಮನಿ, ದಂತಭಾಗ್ಯ ಉಸ್ತುವಾರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಜೀವನದ ಯಶಸ್ಸಿಗೆ ಪರಿಶ್ರಮ, ಪ್ರಾಮಾಣಿಕತೆಯ ಕಾರ್ಯ ಬೇಕು: ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ