ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ – ಬೈಲಹೊಂಗಲ ಪಟ್ಟಣದಲ್ಲಿ ಕೆಲವೇ ಹೊತ್ತಿನ ಮುಂಚೆ ಶೂಟೌಟ್ ನಡೆದಿದೆ.
ಚಿತ್ರನಟ, ಗಣ್ಯ ಶಿವರಂಜನ್ ಬೋಳಣ್ಣವರ್ ಮೇಲೆ 3 ಗುಂಡಿನ ದಾಳಿ ನಡೆೆಸುವ ಯತ್ನ ನಡೆದಿದೆ. 3 -4 ಸುತ್ತು ಗುಂಡು ಹಾರಿಸಲಾಗಿದೆ. ಬೈಕ್ ಮೇಲೆ ಬಂದ ಇಬ್ಬರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆದರೆ ಬೋಳಣ್ಣವರ್ ಅವರಿಗಾಗಲಿ ಅಥವಾ ಬೇರೆ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.
ಗುಂಡು ಹಾರಿಸಿದ ಒಬ್ಬ ಅವರ ಸಹೋದರನ ಸಂಬಂಧಿ ಎಂದು ಗೊತ್ತಾಗಿದೆ. ಹಳೆಯ ಮನೆಯ ಸಮೀಪವೇ ಫೈರಿಂಗ್ ಆಗಿದೆ.
ರಾತ್ರಿ 8 ಗಂಟೆ ಹೊತ್ತಿಗೆ ಘಟನೆ ನಡೆದಿದೆ. ಜಿಲ್ಲಾ ಪೊಲೀಸ್ ವರಾಷ್ಠಾಧಿಕಾರಿ ಸಂಜೀವ್ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಎಲ್ಲೆಡೆ ಬಂಧೋಬಸ್ತ್ ಮಾಡಲಾಗಿದ್ದು, ಆರೋಪಿಗಳ ಶೋಧ ಕಾರ್ಯ ನಡೆದಿದೆ.
ಖಾನಾಪುರ: ತಂದೆ ಹುಟ್ಟುಹಬ್ಬದಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ