Karnataka NewsLatest

ಖಾನಾಪುರ: ಉಕ್ಕಿ ಹರಿದ ಅಲಾತ್ರಾ ಹಳ್ಳ; ಸೇತುವೆ ಮುಳುಗಡೆ, ಸಿಂಧನೂರು- ಹೆಮ್ಮಡಗಾ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭೀಮಗಡ ವನ್ಯಧಾಮದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ  ಬೆಳಿಗ್ಗೆ ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯ‌ ಅಲಾತ್ರ ಹಳ್ಳದ‌ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದೆ.

ಪರಿಣಾಮ ಈ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸಿಬ್ಬಂದಿಯನ್ನು ನಿಯೋಜಿಸಿದೆ.

ಈ ಮಾರ್ಗದಿಂದ ಸಂಚರಿಸುವ ನೂರಾರು ವಾಹನಗಳು ಸುತ್ತುಬಳಸಿ ಪರ್ಯಾಯ ಮಾರ್ಗದಿಂದ ತೆರಳಬೇಕಾಗಿದೆ.

ಈ ಪಾರ್ಕ್ ನಲ್ಲಿ ನೋ ಜಾಗಿಂಗ್, ನೋ ರನ್ನಿಂಗ್.. ನಡೆದು ಉಲ್ಟಾ ಸುತ್ತುವಂತೆಯೂ ಇಲ್ಲ !

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button