Latest

ಮಾಜಿ ಕಾರ್ಪೊರೇಟರ್ ಪತಿ ಹತ್ಯೆಗೆ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಟಿಪ್ಪುನಗರ ವಾರ್ಡ್ ಮಾಜಿ ಕಾರ್ಪೊರೇಟರ್ ನಜಿಮಾ ಅವರ ಪತಿ ಆಯೂಬ್ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯ ಬಗ್ಗೆ ದಾಖಲಾಗಿರುವ ದೂರು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡುವಂತಿದೆ.

ಮಾಜಿ ಕಾರ್ಪೊರೇಟರ್ ನಜಿಮಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಮಸೀದಿಯ ಅಧ್ಯಕ್ಷ ಹುದ್ದೆಗಾಗಿ ಹತ್ಯೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಟಿಪ್ಪು ನಗರದ ಖುದಾದತ್ ಮಸೀದಿ ಅಧ್ಯಕ್ಷ ಸ್ಥಾನಕ್ಕಾಗಿ ಆಯೂಬ್ ಖಾನ್ ಅವರ ಸಹೋದರನ ಮಗ ಮತೀನ್ ಖಾನ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.

15 ವರ್ಷಗಳ ಹಿಂದೆ ಮೃತ ಆಯೂಬ್ ಖಾನ್ ಮಸೀದಿಯ ಅಧ್ಯಕ್ಷರಾಗಿದ್ದರು. ಈ ಹುದ್ದೆ ತನಗೆ ಬಿಟ್ಟುಕೊಡುವಂತೆ ಮತೀನ್ ಪಟ್ಟು ಹಿಡಿದಿದ್ದ. ಇದೇ ವಿಚಾರವಾಗಿ ಕಳೆದ 6 ತಿಂಗಳ ಹಿಂದೆಯೂ ಜಗಳವಾಗಿತ್ತು. ಆಗ ಮತೀನ್ ಚಾಕು ತೋರಿಸಿ ತನ್ನ ಪತಿ ಆಯೂಬ್ ಖಾನ್ ಗೆ ಬೆದರಿಕೆ ಹಾಕಿದ್ದ ಎಂದು ನಜೀಮಾ ದೂರಿದ್ದಾರೆ ಎನ್ನಲಾಗಿದೆ.

ನಿನ್ನೆ ಸಂಜೆ ಮನೆಗೆ ಬಂದಿದ್ದ ಮತೀನ್ ಏಕಾಏಕಿ ಗಲಾಟೆ ಮಾಡಿ ಆಯೂಬ್ ಖಾನ್ ಅವರನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಆಯೂಬ್ ಖಾನ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ರಕ್ತ ಸ್ರಾವದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button