ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಅತಿಯಾದ ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡುವಂತೆ ಯಾವುದೇ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಡಿಡಿಪಿಐಗಳಿಂದ ಕೋರಿಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ಶಾಲೆಗಳಿಗೆ ಇಡೀ ಜಿಲ್ಲೆ ಅಥವಾ ಸಂಪೂರ್ಣ ತಾಲೂಕಿಗೆ ರಜೆ ಕೊಡುವ ಪ್ರಸ್ತಾಪವಿಲ್ಲ. ಆದರೆ ಯಾವುದಾದರೂ ನಿರ್ಧಿಷ್ಟ ಶಾಲೆಗೆ ಅಥವಾ ಗ್ರಾಮಕ್ಕೆ ತೊಂದರೆಯಾದಲ್ಲಿ ರಜೆ ಕೊಡಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಡಿಡಿಪಿಐ ಅವರಿಗೆ ತಿಳಿಸಲಾಗಿದೆ ಎಂದಿದ್ದಾರೆ.
ಜಿಲ್ಲೆಯ ಯಾವುದೇ ಬಿಇಒ ಅಥವಾ ಡಿಡಿಪಿಐ ರಜೆ ನೀಡುವಂತೆ ಕೋರಿಲ್ಲ. ಎಲ್ಲಿಯೂ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇಷ್ಟು ಮಳೆ ಯಾವಾಗಲೂ ಇರುತ್ತದೆ. ಹಾಗಾಗಿ ರಜೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ಆದಾಗ್ಯೂ ಖಾನಾಪುರ ತಾಲೂಕಿನಲ್ಲಿ 30 ಹಳ್ಳಿಗಳ ಸಂಪರ್ಕ ಕಡಿತವಾಗಿದೆ ಎಂದಾದರೆ ರಜೆ ಕೊಡುವ ಸಂಬಂಧ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.
ಗೋವಾ ಹೆದ್ದಾರಿ ಬಂದ್, ಖಾನಾಪುರದ 30 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ