ಪ್ರಗತಿವಾಹಿನಿ ಸುದ್ದಿ, ಮುಂಬೈ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಗೆಟಪ್ನಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದಂತೆ ನೋಡುಗರು ಬೆರಗಾಗಿದ್ದಾರೆ.
ಕಂಗನಾ ಸದ್ಯವೇ ಬಿಡುಗಡೆಯಾಗಲಿರುವ ತಮ್ಮ ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿ ಹೊರತರುತ್ತಿರುವ ‘ಎಮರ್ಜೆನ್ಸಿ‘ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸುತ್ತಿದ್ದಂತೆ ಈ ಫೋಟೊ ಕ್ಲಿಪ್ ಗಳು ವ್ಯಾಪಕ ಪ್ರಚಾರ ಪಡೆಯತೊಡಗಿವೆ. ಇದಕ್ಕೆ ಕಾರಣವೂ ಇದೆ.
70ರ ದಶಕದ ತುರ್ತು ಪರಿಸ್ಥಿತಿಯ ಚಿತ್ರಣ ಬಿಂಬಿಸುವ ‘ಎಮರ್ಜೆನ್ಸಿ‘ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಂಗನಾ ಥೇಟ್ ಇಂದಿರಾ ಗಾಂಧಿಯವರನ್ನೇ ಹೋಲುತ್ತಿರುವುದು ಚಿತ್ರ ವೀಕ್ಷಣೆಗೆ ಪ್ರೇಕ್ಷಕರಲ್ಲಿ ಈಗಲೇ ಕಾತುರ ಮೂಡಿಸಿದೆ.
ಈ ಮೇಕಪ್ ಗಾಗಿ ಕಂಗನಾ ಆಸ್ಕರ್ ಪುರಸ್ಕೃತ ಮೇಕಪ್ ಆರ್ಟಿಸ್ಟ್ ಮೆಲಿನೋಸ್ಕಿ ಅವರನ್ನು ಕರೆತಂದಿದ್ದಾರೆ. ಚಿತ್ರದ ಶೂಟಿಂಗ್ ಇನ್ನೂ ಜಾರಿಯಲ್ಲಿದ್ದು ಗುರುವಾರವಷ್ಟೇ ಟೀಸರ್ ಬಿಡುಗಡೆಯಾಗಿದೆ.
ಮಕ್ಕಳ ಎದುರಲ್ಲೇ ಪತ್ನಿಯನ್ನು ಕಡಾಯಿಯಲ್ಲಿ ಬೇಯಿಸಿ ಕೊಂದ ಪತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ