Kannada NewsKarnataka News
ಬೆಳಗಾವಿ ಜಿಲ್ಲೆಯ CRIME News : ಶಾಲಾ ಬಾಲಕಿ ದುರ್ಮರಣ, ಆಭರಣ ವಂಚನೆ, ದೇವರ ಮೂರ್ತಿ ಕಳ್ಳತನ, ಪಡಿತರ ಅಕ್ಕಿ ಮಾರಾಟ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳ ಮಾಹಿತಿ ಇಲ್ಲಿದೆ.
ಮಾಂಜರಿಯಲ್ಲಿ ಟ್ರಕ್ ಹಾಯ್ದು ಗಾಯಗೊಂಡಿದ್ದ ಮೂವರು ಶಾಲಾ ಮಕ್ಕಳ ಪೈಕಿ ಓರ್ವ ಬಾಲಕಿ ಚಿಕಿತ್ಸೆ ಪಡೆಯದೆ ಸಾವಿಗೀಡಾಗಿದ್ದಾಳೆ.
ನಂದಗಡದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಭರಣ ತೊಳೆದುಕೊಡುವುದಾಗಿ ಹೇಳಿ ವಂಚಿಸಲಾಗಿದೆ.
ಕೊಡಗಾನೂರು ಗ್ರಾಮದಲ್ಲಿ ದೇವಸ್ಥಾನದ ಕೀಲಿ ಮುರಿದು ದೇವರ ಮೂರ್ತಿಗಳನ್ನು ಕದ್ದೊಯ್ಯಲಾಗಿದೆ.
ಶಾಲಾ ಬಾಲಕಿ ಸಾವು:
ಅನೀಲ ಹಂಗು ಗೌಳ (ಸಾ: ನಿಮೋನೆ ಮೋಟವಾಡಿ ತಾ: ಶಿರೂರ ಜಿ: ಮಣಿ ರಾ: ಮಹಾರಾಷ್ಟ್ರ) ಇವನು ದಿನಾಂಕಃ 15/07/2022 ರಂದು 09.15 ಗಂಟೆಯ ಸುಮಾರಿಗೆ ಮಾಂಜರಿ ಗ್ರಾಮದಲ್ಲಿ ಇರುವ ಅಣ್ಣಪೂರ್ಣೇಶ್ವರಿ ಪೆಟ್ರೋಲ್ ಪಂಪ್ ಹತ್ತಿರ ಚಿಕ್ಕೋಡಿ – ಮಿರಜ್ ಡಾಂಬರ ರಸ್ತೆಯ ಮೇಲೆ ಟಾಟಾ ಐಶರ್ ಟ್ರಕ್ (ನಂಬರ್: ಎಮ್.ಎಚ್-16/ಸಿಸಿ 4659)ನ್ನು ಮಿರಜ್ ಕಡೆಯಿಂದ ಅಂಕಲ ಕಡೆಗೆ ಅತೀ ಜೋರಾಗಿ ನಿಷ್ಕಾಳಜಿತನದಿಂದ ಓಡಿಸಿ, ಮನೆಯಿಂದ ಮಾಂಜರಿ ಕಡೆಗೆ ಮಕ್ಕಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ನಾಗೇಂದ್ರ ಭುಜಪ್ಪ ಗುಣಕೆ ಅವರ ಟಿ.ವಿ.ಎಸ್ ಎಕ್ಸಲ್ ಮೋಟಾರ ಸೈಕಲ್ (ನಂಬರ: ಕೆ.ಎ 49/ಎಚ್-3165) ಗೆ ಹಿಂದಿನಿಂದ ಹಾಯಿಸಿದ್ದಾನೆ.
ಮೋಟಾರ್ ಸೈಕಲ್ ನಡೆಸುತ್ತಿದ್ದ ನಾಗೇಂದ್ರ ಗುಣಕೆ ಇವನಿಗೆ ಹಾಗೂ ಮೋಟಾರ ಸೈಕಲ್ ಮೇಲೆ ಕುಳಿತ ರಶಿತ್ ಪ್ರವೀಣ ಗುಣಕೆ, ಸಿಂಚನಾ ಪಾರೀಸ ಗುಣಕೆ ಮತ್ತು ಸುದರ್ಶನ ಪಾರೀಸ ಗುಣಕೆ ಇವರೆಲ್ಲರೂ ಗಾಯಗೊಂಡಿದ್ದರು.
ಕುಮಾರಿ ಸಿಂಚನಾ ಪಾರೀಸ ಗುಣಕೆ (ಸಾ: ಮಾಂಜರಿ ಇವಳಿಗೆ ಮಾಂಜರಿ) ಇವಳನ್ನು ಚಿಕ್ಕೋಡಿಯ ಕೆ.ಎಲ್.ಇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವಳು ಅಲ್ಲಿ ಉಪಚಾರ ಫಲಿಸದೆ ಸಾವಿಗೀಡಾಗಿದ್ದಾಳೆ.
ಅಕ್ಕಿ ಮಾರಾಟ ಯತ್ನ
ಸಮೀರ ಅಬ್ದಲ್‌ರಹಮಾನ ತಹಶೀಲ್ದಾರ, (ವಯಸ್ಸು 35 ವರ್ಷ ಉದ್ಯೋಗಃ ಡ್ರೈವರ್ ಸಾಃ ಫೀರನವಾಡಿ ಬೆಳಗಾವಿ) ಇವನು ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ ಮಾಡಲು ನೀಡಿರುವ ಪಡಿತರ ಆಹಾರ ಸಾಮಾಗ್ರಿಯಾದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಯಾವುದೆ ಸಕ್ಷಮ ಪ್ರಾಧಿಕಾರದಿಂದ ಅಥವಾ ಸಂಬಂಧಪಟ್ಟ ಇಲಾಖೆಯಿಂದಾಗಲಿ ಅನುಮತಿ ಪಡೆಯದೆ ನಂದಗಡ ಕಾಳ ಸಂತೆಗಳಲ್ಲಿ 20,000 ರೂಪಾಯಿ ಕಿಮ್ಮತ್ತಿನ 1 ಟನ್ ಅಕ್ಕಿಯನ್ನು ಖರೀಧಿ ಮಾಡಿಕೊಂಡು ಅವುಗಳನ್ನು 20 ಗೊಬ್ಬರ ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಿ ಅವುಗಳನ್ನು ಓಮನಿ ವ್ಯಾನ್ (ಎಮ್.ಎಚ್. 20 ಬಿಎನ್ 5455) ನೇದ್ದರಲ್ಲಿ ಲೋಡ್ ಮಾಡಿಕೊಂಡು ನಂದಗಡದಿಂದ ಖಾನಾಪುರಕ್ಕೆ ಮಾರಾಟ ಮಾಡುವ ಸಲುವಾಗಿ ಹೋಗುವಾಗ ಸಿಕ್ಕಿ ಬಿದ್ದಿದ್ದಾನೆ.
ಆಭರಣ ತೊಳೆದುಕೊಡುವುದಾಗಿ ವಂಚನೆ
ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವಕುಮಾರ ಭೀಮಗೌಡ ನೇಮಗೌಡರ ಇವರ ಮನೆಗೆ ಬಂದ ವ್ಯಕ್ತಿಯೋರ್ವ ನಾವು ಕಂಪನಿಯಿಂದ ಬಂದಿದ್ದೇವೆ ಎಂದು ಹೇಳಿ ಹಿತ್ತಾಳೆ ಹಾಗೂ ಬೆಳ್ಳಿ – ಬಂಗಾರದ ಸಾಮಾನುಗಳನ್ನು ತೊಳೆದು ಕೋಡುತ್ತೆವೆ ಎಂದು ಹಿತ್ತಾಳೆ ಚರಿಗೆಯನ್ನು ತೊಳೆದು ಕೊಟ್ಟ ನಂತರ ಬೆಳ್ಳಿ ಬಂಗಾರ ಸಾಮಾನು ಇದ್ದರೆ ತೊಳೆದು ಕೋಡುತ್ತೆವೆ ಎಂದು ನಂಬಿಸಿ ವಂಚಿಸಿದ್ದಾನೆ.
35 ಗ್ರಾಂ ಬಂಗಾರದ ತಾಳಿ (ಅ.ಕಿ-32,000/- ರೂಪಾಯಿ) ಹಾಗೂ 15 ಗ್ರಾಂ ಬಂಗಾರದ ನಕ್ಲೆಸ್ (ಅ.ಕಿ-9000/- ರೂಪಾಯಿ) ಹೀಗೆ ಒಟ್ಟು 45 ಗ್ರಾಂ ಬಂದಾಗರದ ಆಭರಣಗಳು, (ಒಟ್ಟು ಕಿಮ್ಮತ್ತು 41,000/ ರೂಪಾಯಿ) ವಂಚಿಸಲಾಗಿದೆ.
ಬಂಗಾರದ ಆಭರಣಗಳಿಗೆ ಯಾವುದೋ ಪೌಡರ್ ಹಚ್ಚಿ ತೊಳೆದು ನೀರಿನ ಬಕೇಟ್ ಲ್ಲಿ ಹಾಕಿ 15 ನಿಮಿಷ ಬಿಟ್ಟು ಬಕೇಟದಲ್ಲಿರುವ ಪಾಕೇಟಗಳನ್ನು ತೆಗೆದುಕೊಳ್ಳಿ ಎಂದು ಹೇಳಿ ಹೋಗಿದ್ದ. 15 ನಿಮಿಷದ ನಂತರ ಬಕೇಟ್ ದಲ್ಲಿನ ಪಾಕೀಟನ್ನು ತೆಗೆದು ನೋಡಲು ಅದರಲ್ಲಿ ಸಣ್ಣ ಸಣ್ಣ ಕಲ್ಲುಗಳು ಇದ್ದವು. ಸುಮಾರು 30-35 ವರ್ಷ ವಯಸ್ಸಿನವರು ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗಿ ವಂಚಿಸಿರುವ ಕುರಿತು ದೂರು ದಾಖಲಾಗಿದೆ.
ದೇವಸ್ಥಾನ ಕಳ್ಳತನ
ದಿನಾಂಕ: 14/07/2022 ಮತ್ತು 15/07/2022 ರ ಮಧ್ಯೆ ಕೊಡಗಾನೂರ ಗ್ರಾಮದಲ್ಲಿರುವ ಮರುಗುಬಾಯಿ ದೇವಸ್ಥಾನದ ಬಾಗಿಲ ಕೀಲಿಯನು ಮುರಿದು ದೇವಸ್ಥಾನದಲ್ಲಿದ್ದ ಎರಡೂವರೆ ಕಿಲೋ ತೂಕದ ಸದಾಶಿವ ಮುತ್ಯಾನ ಕಂಚಿನ ಮೂರ್ತಿ ಮತ್ತು ಇನ್ನೊಂದು ಮೂರ್ತಿಯನ್ನು ಕದ್ದೊಯ್ದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ