ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ರಾಜ್ಯಾದ್ಯಂತ ಭಾರಿ ಮಳೆ ಅಬ್ಬರಕ್ಕೆ ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೊಡಗು ಜಿಲ್ಲೆಯಾದ್ಯಂತ ವರುಣಾರ್ಭಟಕ್ಕೆ ಭೂಕುಸಿತವುಂಟಾಗುತ್ತಿದ್ದು, ಜಿಲ್ಲಾಧಿಕಾರಿಯ ಕಚೇರಿಯೇ ಕುಸಿದು ಬೀಳುವ ಹಂತ ತಲುಪಿದೆ.
ಮಡಿಕೇರಿ-ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಸ್ಲ್ಯಾಬ್ ಗಳು ಹೊರಚಾಚಿದ್ದು, ಬೀಳುವ ಆತಂಕ ಎದುರಾಗಿದೆ.
ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ವಾಹನ ಸವಾರರು ಬದಲಿ ಮಾರ್ಗ ಅನುಸರಿಸುವಂತೆ ಸೂಚಿಸಲಾಗಿದೆ. ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹಾಗೂ ಬರುವವರು ಮೇಕೆರಿ-ಅಪ್ಪಂಗಳ-ತಾಳತ್ತಮನೆ ಜಂಕ್ಷನ್ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ಇನ್ನು ಜಿಲ್ಲಾಧಿಕಾರಿ ಕಚೇರಿ ಗೋಡೆಯ ಸ್ಲ್ಯಾಬ್ ಗಳು ಹೊರಚಾಚಿದ್ದರೂ ಅದು ಬೀಳುವ ಆತಂಕವಿಲ್ಲ. ಒಳಗೆ ನೀರು ಸೇರಿದ್ದರಿಂದ ಸ್ಲ್ಯಾಬ್ ಗಳು ಹೊರಚಾಚಿವೆ. ತಡೆಗೋಡೆ ಬೀಳುವುದಿಲ್ಲ ಎಂದು ಲೋಕೋಪಯೋಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಭಾರಿ ಮಳೆಗೆ ಭೀಕರ ಪ್ರವಾಹ; ಭದ್ರಾ ನದಿಯಲ್ಲಿ ತೇಲಿ ಬರುತ್ತಿರುವ ಶವಗಳು; ಕಂಗಾಲಾದ ಗ್ರಾಮಸ್ಥರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ