Latest

ಮಹಿಳೆ ಕೊಲೆ ಪ್ರಕರಣ ಭೇದಿಸಿದ ಕ್ಯಾಂಪ್ ಪೊಲೀಸರು; 3 ಜನರ ಬಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮೇ 12ರಂದು ನಡೆದ ಮಹಿಳೆ ಕೊಲೆ ಪ್ರಕರಣವನ್ನು ಕ್ಯಾಂಪ್ ಪೊಲೀಸರು ಭೇದಿಸಿದ್ದು, ಮೂವರನ್ನು ಬಂಧಿಸಿದ್ದಾರೆ. 

 ಗೋಗಟೆ ಸರ್ಕಲ್ ಹತ್ತಿರ ಮಧ್ಯರಾತ್ರಿ ಈ ಕೊಲೆ ನಡೆದಿತ್ತು.  ಆಕಾಸಪು ಪರಸು ರಾಮುಡು ತಂದೆ ಆಕಾಸಪು ಶ್ರೀರಾಮುಲು ಈತನ ಜೋಪಡಪಟ್ಟಿಗೆ ನುಗ್ಗಿದ ಕೆಲವರು  ಆತನ ತಾಯಿ ವೀರಾರಾಘವಾಳಿಗೆ  ಸಿಮೆಂಟ್ ಟೈಲ್ಸ್‌ನಿಂದ ಹಣೆಗೆ ಹೊಡೆದು  ಕೊಲೆ ಮಾಡಿದ್ದರು. ಅದನ್ನು ನೋಡಿ ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಆಕಾಸಪು ಪರಸು ರಾಮುಡುಗೂ  ಹೊಡೆದು ಓಡಿ ಹೋಗಿದ್ದರು.  ಈ ಬಗ್ಗೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ಕೊಲೆಗಾರರ ಪತ್ತೆಗಾಗಿ ತಂಡ  ರಚಿಸಲಾಗಿತ್ತು.
ಈ ಘಟನೆಯ ಬಗ್ಗೆ ಸೂಕ್ಷ್ಮವಾಗಿ ಮಾಹಿತಿ ಕಲೆ ಹಾಕಿ ಸಂಶಯುಕ್ತ ಆರೋಪಿಗಳಾದ  ರಾಜು ನಿಂಗಪ್ಪ ಪಾಟೀಲ, ವಯಸ್ಸು ೨೪ ವರ್ಷ ಸಾ: ಲಕ್ಷ್ಮೀ ಗುಡಿ ಹತ್ತಿರ ಖಾನಾಪೂರ,  ಹಾಲಿ ರೈಲ್ವೆ ಸ್ಟೇಶನ್ ಹತ್ತಿರ ಬ್ರಿಜ್ ಕೆಳಗೆ ಕ್ಯಾಂಪ್ ಬೆಳಗಾವಿ,   ಜುಬೇರ ಪುತ್ತನ್ ಖಾನ್ ವಯಸ್ಸು ೨೨ ವರ್ಷ ಸಾ: ಇಂದಿರಾ ನಗರ ಚಿಕ್ಕೋಡಿ ತಾ: ಚಿಕ್ಕೋಡಿ,  ಹಾಲಿ ರೈಲ್ವೆ ಸ್ಟೇಶನ್ ಹತ್ತಿರ ಬ್ರಿಜ್ ಕೆಳಗೆ ಕ್ಯಾಂಪ್ ಬೆಳಗಾವಿ,  ಈರಣ್ಣಾ ನಾರಾಯಣಪ್ಪ ಕಳಸನ್ನವರ ವಯಸ್ಸು ೨೯ ವರ್ಷ ಸಾ: ನಡುವಿನ ಪೇಟೆ ಸುರೇಬಾನ ತಾ: ರಾಮದುರ್ಗ,   ಹಾಲಿ ರೈಲ್ವೆ ಸ್ಟೇಶನ್ ಹತ್ತಿರ ಬ್ರಿಜ್ ಕೆಳಗೆ ಕ್ಯಾಂಪ್ ಬೆಳಗಾವಿ ಇವರನ್ನು  ಕುಲಂಕಷವಾಗಿ ವಿಚಾರಣೆ ನಡೆಸಿದಾಗ ಮೃತಳ ಬಳಿ ಇರುವ 25 ಸಾವಿರ ರೂ.  ದೋಚುವ ಉದ್ದೇಶದಿಂದ ಅವಳ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಎಲ್ಲ ಮೂರು ಜನ ಆರೋಪಿತರನ್ನು ಬಂಧಿಸಿ ಅವರಿಂದ ದೋಚಿದ ಹಣ ಹಾಗೂ ಕೃತ್ಯಕ್ಕೆ ಬಳಿಸಿದ ಆಯುಧ ಹಾಗೂ ಕಳುವು ಮಾಡಿದ ಹಣದಿಂದ ಖರೀದಿಸಿದ ವಸ್ತುಗಳು ಮತ್ತು ಉಳಿದ 2,600 ರೂ. ಹಣವನ್ನು ಜಪ್ತ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಚನ್ನಕೇಶವ ಬಿ ಟಿಂಗರಿಕರ ಪಿ.ಐ ಕ್ಯಾಂಪ ಹಾಗೂ ಅವರ  ಸಿಬ್ಬಂದಿಯಾದ ಮಂಜುನಾಥ ನಾಯಕ ಪಿ.ಎಸ್.ಐ,  ಬಿ.ಆರ್. ಡೂಗ ಎ.ಎಸ್.ಐ, ಎಮ್.ವಾಯ್.ಹುಕ್ಕೇರಿ ಎ.ಎಸ್.ಐ,  ಎಸ್ ಎಂ ಬಾಂಗಿ ಎಎಸ್‌ಐ,  ಜೆ.ಎ.ಮಗದುಮ್ಮ,  ಬಿ.ಬಿ. ಗೌಡರ,   ಆರ್.ಎಸ್. ಪೂಜೇರಿ, ಶ್ರೀ ಕೆ.ಎಮ್. ಬನೋಶಿ, ಶ್ರೀ ಮಹೇಶ ಪಾಟೀಲ, ಶ್ರೀ ಬಿ.ಎಮ್. ನರಗುಂದ, ಶ್ರೀ ಬಿ.ಎಮ್. ಕಲ್ಲಪ್ಪನವರ,  ಎ.ಬಿ. ಘಟ್ಟದ,  ಎಸ್ ಎಚ್ ತಳವಾರ ಇವರ  ಕಾರ್ಯವನ್ನು ಪೊಲೀಸ್ ಆಯುಕ್ತ  ಲೋಕೇಶಕುಮಾರ ಬಿ ಎಸ್  ಶ್ಲಾಘಿಸಿದ್ದಾರೆ.

Home add -Advt

Related Articles

Back to top button