Kannada NewsKarnataka NewsLatest

*ಮಾವನ ಜೊತೆ ಸಂಬಂಧ ಹೊಂದುವಂತೆ ಅತ್ತೆಯಿಂದಲೇ ಸೊಸೆಗೆ ಕಿರುಕುಳ*

ಪ್ರಗತಿವಾಹಿನಿ ಸುದ್ದಿ: ಮಾವನ ಜೊತೆ ಅಕ್ರಮ ಸಂಬಂಧ ಹೊಂದುವಂತೆ ಅತ್ತೆಯೇ ಸೊಸೆಗೆ ಕಿರುಕುಳ ನೀಡಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೊಸೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅತ್ತೆ-ಮಾವನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಯಾಸಿನ್ ಪಾಷಾ ಹಾಗೂ ಪತ್ನಿ ಶಾಸಿಯಾ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೋಷಕರ ವಿರೋಧದ ನಡುವೆಯೂ ಯಾಸಿನ್ ಪಾಷಾ, ಶಾಸಿಯಾಳನ್ನು ವಿವಾಹವಾಗಿ ಮನೆಗೆ ಕರೆತಂದಿದ್ದಕ್ಕೆ ಕೋಪಗೊಂಡ ಅತ್ತೆ-ಮಾವ ಸೊಸೆಗೆ ಕಿರುಕುಳ ನೀಡಿದ್ದಾರೆ. ಅತ್ತೆ ಹುಮೇರಾ ಹಾಗೂ ಮಲಮಾವ ಅಕ್ಬರ್ ಸೊಸೆ ಶಾಸಿಯಾಳಿಗೆ ಕಿರುಕುಳ ನೀಡುವುದು, ಹಿಂಸಿಸುವುದು ಮಾಡುತ್ತಿದ್ದರಂತೆ. ಅತ್ತೆ ಹುಮೇರಾ, ಮಾವನ ಜೊತೆ ಅನೈತಿಕ ಸಂಬಂಧ ಹೊಂದುವಂತೆ ಸೊಸೆಗೆ ಕಿರುಕುಳ ನೀಡುತ್ತಿದ್ದರಂತೆ. ಒಪ್ಪದಿದ್ದಾಗ ಆತ್ಮಹತ್ಯೆ ಮಾಡಿಕೊ ಎಂದು ಹಿಂಸಿಸುತ್ತಿದ್ದರಂತೆ.

ಇದರಿಂದ ನೊಂದ ಶಾಸಿಯಾ ಹಾಗೂ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾರೆ. ಅತ್ತೆ-ಮಾವನ ವಿರುದ್ಧ ಎಫ್ಐಆರ್ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button