Latest

ಏಕದಿನ ಸರಣಿಯಲ್ಲಿ ಶತಕ ಬಾರಿಸಿ ಗೆಲುವು ತಂದ ರಿಷಭ್ ಪಂತ್

 ಪ್ರಗತಿವಾಹಿನಿ ಸುದ್ದಿ, ಮ್ಯಾಂಚೆಸ್ಟರ್: ರಿಷಭ್ ಪಂತ್ ಅವರ ಮೊದಲ ಏಕದಿನ ಶತಕದ ನೆರವಿನಿಂದ ಭಾರತ ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.

ಏಕದಿನ ಕ್ರಿಕೆಟ್‌ನಲ್ಲಿ ರಿಷಬ್ ಪಂತ್ ಅವರ ಮೊದಲ ಶತಕದ ನೆರವಿನಿಂದ ಭಾರತವು ಇಂಗ್ಲೆಂಡ್  ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ 3 ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು.

ರಾಹುಲ್ ದ್ರಾವಿಡ್ ನಂತರ ಇಂಗ್ಲೆಂಡ್‌ನಲ್ಲಿ ಏಕದಿನ ಶತಕ ಬಾರಿಸಿದ ಎರಡನೇ ಭಾರತೀಯ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾದರು.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತಕ್ಕೆ ಇದು ಸತತ 8ನೇ ಅಂತಾರಾಷ್ಟ್ರೀಯ ಸರಣಿ ಜಯವಾಗಿದೆ.

ಸೇತುವೆಗೆ ಕಾರು ಡಿಕ್ಕಿ; ತಂದೆ ಸಾವು, ಮಗಳಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button