ಸೇತುವೆಗೆ ಕಾರು ಡಿಕ್ಕಿ; ತಂದೆ ಸಾವು, ಮಗಳಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಭಟ್ಕಳ: ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಅವರ ಪುತ್ರಿ ಗಂಭೀರ ಗಾಯಗೊಂಡಿದ್ದಾಳೆ.

ತಾಲೂಕಿನ ಬೆಳಕೆ ಬಳಿ ಈ ದುರ್ಘಟನೆ ನಡೆದಿದೆ. ವಿದ್ಯುತ್ ಗುತ್ತಿಗೆದಾರ  ಜೊಸೆಫ್ ಕುಟ್ಟಿ (46) ಮೃತಪಟ್ಟವರು. ಅವರ ಪುತ್ರಿ ಅನು ಮರಿಯಾ (16) ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

ಜೊಸೆಫ್ ಅವರು ನೀಟ್ ಪರೀಕ್ಷೆಗಾಗಿ ಮಗಳಿಗೆ ಮಂಗಳೂರಿಗೆ ಕರೆದೊಯ್ಯುವಾಗ ಬೆಳಕೆ ಸೇತುವೆಗೆ ಕಾರು ಡಿಕ್ಕಿ ಹೊಡೆದಿದೆ. ಜೊಸೆಫ್ ಅವರ ತಲೆಯ ಎಡಭಾಗಕ್ಕೆ ತೀವ್ರ ಏಟು ತಗುಲಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ವಸ್ತುಗಳೆಲ್ಲ ಇಂದಿನಿಂದ ಗ್ರಾಹಕರಿಗೆ ದುಬಾರಿಯಾಗಲಿವೆ

 

Related Articles

Back to top button