
ಪ್ರಗತಿವಾಹಿನಿ ಸುದ್ದಿ: ಅನುದಾನ ಬಂದಿಲ್ಲ, ಗುತ್ತಿಗೆದಾರರು ಕಿರುಕುಳ ಕೊಡುತ್ತಿದ್ದಾರೆ ಎಂದು ಮನನೊಂದು ನಾಪತ್ತೆಯಾಗಿದ್ದ ಗದಗ ಕೆಆರ್ಐಡಿಎಲ್ ಇಲಾಖೆ ಎಇಇ ಪತ್ತೆ ಕಾರ್ಯಕ್ಕಾಗಿ ಗದಗ ಎಸ್ಪಿ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳ 5 ತಂಡ ರಚನೆ ಮಾಡಲಾಗಿದೆ.
ಎಇಇ ಫರ್ವೇಜ್ ಧಾರವಾಡ ಅವರು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತ್ತೆಗಾಗಿ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಶೋಧ ನಡೆಯುತ್ತಿದೆ. ಅಧಿಕಾರಿ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ಐದು ತಂಡ ರಚಿಸಲಾಗಿದೆ.
ಸರ್ಕಾರದಿಂದ ಅನುದಾನ ಬಾರದಕ್ಕೆ ಗುತ್ತಿಗೆದಾರರು ಕಿರುಕುಳ ಕೊಡ್ತಿದ್ದಾರೆ ಎಂದು ನೊಂದು ಇಲಾಖೆ ಎಂಡಿಗೆ ಪತ್ರ ಬರೆದಿಟ್ಟು ನಾಪತ್ತೆಯಾಗಿರುವುದು ರಾಜಕೀಯ ಚರ್ಚೆಗೂ ಕಾರಣವಾಗಿದೆ. ಸೆ.13ರಂದು ಬೆಂಗಳೂರು ಇಲಾಖೆ ಮೀಟಿಂಗ್ ಹೋಗುವುದಾಗಿ ಮನೆಯಿಂದ ಹೋಗಿದ್ದಾರೆ. ಫೋನ್ ಸ್ವಿಚ್ ಆಫ್ ಆಗಿದ್ದು, ಮರಳಿ ಬಾರದಿದ್ದಕ್ಕೆ ಕಳೆದ 16ರಂದು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಗದಗದಿಂದ ಬೆಂಗಳೂರಿಗೆ ಬಂದಿದ್ದ ಫರ್ವೇಜ್ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡದತ್ತ ಹೋದ ಮಾಹಿತಿ ಇದೆ. ಅವರ ಫೋನ್ ಕೊನೆಯ ಲೊಕೇಷನ್ ವಿಜಯವಾಡ ಎಂದು ಗೊತ್ತಾಗಿದೆ. ಫರ್ವೇಜ್ ಮನೆಯಿಂದ ಹೋಗುವಾಗ 40 ಸಾವಿರ ನಗದು ಕೊಂಡೊಯ್ದಿದ್ದಾರೆ. ಆದರೆ ಈವರೆಗೆ ಫರ್ವೇಜ್ ಎಟಿಎಂ ಕಾರ್ಡ್, ಮೊಬೈಲ್ ಎಲ್ಲೂ ಬಳಕೆ ಮಾಡಿಲ್ಲ. ಆ ಟೆಕ್ನಿಕಲ್ ಸುಳಿವಿನಿಂದ ಗದಗ ಪೊಲೀಸರು ಆಂಧ್ರದತ್ತ ಪತ್ತೆ ಕಾರ್ಯಕ್ಕೆ ಹೋಗಿದ್ದಾರೆ. ಎಸ್ಪಿ ಮಿಥುನ್ ಎಚ್.ಎನ್ ಮಾರ್ಗದರ್ಶನ, ಡಿವೈಎಸ್ಪಿ ಮೇಲ್ವಿಚಾರಣೆಯಲ್ಲಿ ಅಧಿಕಾರಿ ಪತ್ತೆಗಾಗಿ 5 ತಂಡಗಳಿಂದ ಶೋಧ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




