Latest

ಝೊಮೆಟೊ ಡೆಲಿವರಿ ಬಾಯ್ ಗೆ ವೇಗ ನೀಡಿ ನೆರವಾದ ಸ್ವಿಗ್ಗಿ ಬಾಯ್; ವಿಡಿಯೋ ವೈರಲ್

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಇಬ್ಬರೂ ಆಹಾರ ಸರಬರಾಜು ಮಾಡುವ ಪ್ರತ್ಯೇಕ ಕಂಪನಿಗಳ ಡೆಲಿವರಿ ಬಾಯ್ ಗಳು. ಆದರೆ ‘ಪರಸ್ಪರ ಸಹಕಾರ’ ಎಂಬುದಕ್ಕೆ ನಿದರ್ಶನವೂ ಆಗುವ ಮೂಲಕ ಜಾಲತಾಣದಲ್ಲಿ ಶರವೇಗದ ಸಂಚಾರದ ಸುದ್ದಿಗೆ ಗ್ರಾಸವಾಗಿದ್ದಾರೆ.

ಈ ಘಟನೆ ನಡೆದಿದ್ದು ದೇಶದ ರಾಜಧಾನಿ ದೆಹಲಿಯಲ್ಲಿ. ಸ್ವಿಗ್ಗಿ ಡೆಲಿವರಿ ಬಾಯ್. ಯಾರಿಗೋ ಫುಡ್ ಡೆಲಿವರಿಗೆ ಬೈಕ್ ನಲ್ಲಿ ಹೊರಟಿರುವ ಆತ ಬೈಸಿಕಲ್ ತುಳಿಯುತ್ತಿರುವ ಇನ್ನೊಬ್ಬನ ಕೈ ಹಿಡಿದು ತನ್ನ ಬೈಕ್ ವೇಗದಲ್ಲೇ ಆತನನ್ನೂ ಕೊಂಡೊಯ್ಯುತ್ತಿದ್ದಾನೆ.

ಸೈಕಲ್ ತುಳಿಯುತ್ತಿರುವಾತ ಬೇರಾರೂ ಅಲ್ಲ. ಮಾರುಕಟ್ಟೆಯಲ್ಲಿ ಸ್ವಿಗ್ಗಿ ಕಂಪೆನಿಯ ಪ್ರತಿಸ್ಪರ್ಧಿ ಝೊಮೆಟೊ ಕಂಪೆನಿ ಡೆಲಿವರಿ ಬಾಯ್. ತನ್ನ ಬಳಿ ಬೈಕ್ ಇದೆ. ಆತನ ಬಳಿ ಸೈಕಲ್. ತನ್ನಷ್ಟು ವೇಗ ಅದಕ್ಕಿಲ್ಲ. ಹಾಗಂತ ತನ್ನ ವೇಗದಲ್ಲೇ ಆತನೂ ತೆರಳಿ ಕ್ಷಿಪ್ರ ಡೆಲಿವರಿ ನೀಡಲು ನೆರವಾಗಲಿ ಎಂಬುದು ಬೈಕ್ ಚಲಾಯಿಸುತ್ತಿರುವ ಡೆಲಿವರಿ ಬಾಯ್ ಆಶಯ.

ಈ ವಿಡಿಯೊ ಜಾಲತಾಣದಲ್ಲಿ ಭಾರೀ ಪ್ರಮಾಣದ ಸಂಚಲನ ಮೂಡಿಸಿದ್ದು ಕಾಮೆಂಟ್ ಗಳ ಮಹಾಪೂರವೇ ಹರಿದುಬರತೊಡಗಿದೆ. ‘ವೃತ್ತಿಯಲ್ಲಿ ಪ್ರತ್ಯೇಕವಾದರೂ ಮಾನವೀಯತೆಯಿಂದ ಒಂದಾದವರು’ ಎಂದು ನೆಟ್ಟಗರೊಬ್ಬರು ಉಲ್ಲೇಖಿಸಿದ್ದಾರೆ.

Home add -Advt

ಸ್ನೇಹಿತೆಯ ತುಟಿಗೆ ಮುತ್ತಿಟ್ಟು ಹುಕ್ಕಾ ಹೊಗೆ ಬಿಟ್ಟ ಸ್ಯಾಂಡಲ್ ವುಡ್ ನಟಿ

Related Articles

Back to top button