ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಭೂಪಿಂದರ್ ಸಿಂಗ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಭೂಪಿಂದರ್ ಸಿಂಗ್ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ವಾರದ ಹಿಂದೆ ಅವರಿಗೆ ಕೊರೊನಾ ಸೋಂಕು ಕೂಡ ತಗುಲಿತ್ತು. ಈ ಹಿನ್ನೆಲೆಯಲ್ಲಿ ಮುಂಬೈನ ಅಂಧೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಇಂದು ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಭೂಪಿಂದರ್ ಸಿಂಗ್ ಪತ್ನಿ ಮಿತಾಲಿ ಸಿಂಗ್ ತಿಳಿಸಿದ್ದಾರೆ.
ಪಂಜಾಬ್ ನ ಅಮೃತಸರ ಮೂಲದ ಭೂಪಿಂದರ್ ಸಿಂಗ್, ಆಲ್ ಇಂಡಿಯಾ ರೆಡಿಯೋ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. 1964ರಲ್ಲಿ ಚೇತನ್ ಆನಂದ್ ನಿರ್ದೇಶನದ ಹಕೀಕತ್ ಸಿನಿಮಾದಲ್ಲಿ ಹೊಕೆ ಮಜ್ಬೂರ್ ಹಾಡಿನ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ನಾಮ್ ಗಮ್ ಜಾಯೆಗಾ, ಹೊತಾ ಪೆ ಐಸಿ ಬಾತ್, ಕಭಿ ಕಿಸಿ ಕೋ ಮುಕಮ್ಮಲ್ ಜಹಾ ನಹಿ ಮಿಲ್ತಾ.. ಸೇರಿದಂತೆ ಹಲವು ಸೂಪರ್ ಹಿಟ್ ಹಾಡುಗಳಿಗೆ ಭೂಪಿಂದರ್ ಸಿಂಗ್ ಧ್ವನಿಯಾಗಿದ್ದರು.
ಭಯಂಕರ ಶಬ್ಧದೊಂದಿಗೆ ಕುಸಿದ ಭೂಮಿ; ಕೊಚ್ಚಿ ಬಂದ 5 ಎಕರೆ ಭೂ ಪ್ರದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ