Latest

ಮನೆಮನೆಗೆ ಮದ್ಯದ ಪೈಪ್ ಲೈನ್: ಸರಕಾರ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಜನರು ತಮ್ಮ ಮನೆಗಳಲ್ಲಿ ‘ಮದ್ಯ ಪೈಪ್‌ಲೈನ್’ ಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ವೈರಲ್ ಪೋಸ್ಟ್ ಕುರಿತು ಸರಕಾರ ತುಟಿಬಿಚ್ಚಿದೆ.

ಈ ಕುರಿತ ಪೋಸ್ಟ್ ಶೇರ್ ಮಾಡಿದ  ಪೋಸ್ಟ್ ನಲ್ಲಿ ‘ಸ್ವಾಗತ’ ಚಿತ್ರದ ನಾನಾ ಪಾಟೇಕರ್ ಅವರ ಚಿತ್ರವನ್ನು ಸಹ ಹಂಚಿಕೊಂಡಿದ್ದಾನೆ. ಅದರಲ್ಲಿ “ನಿಯಂತ್ರಣ…” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆದ ನಕಲಿ ಪೋಸ್ಟ್ ನಲ್ಲಿ ಮದ್ಯದ ಪೈಪ್ ಲೈನ್ ಸಂಪರ್ಕಕ್ಕೆ 11,000 ಬೇಡಿಕೆ ರೂ. ಇಡಲಾಗಿದೆ.

ಆದರೆ  ಇದೊಂದು ನಕಲಿ ಪೋಸ್ಟ್ ಎಂದು ಹೇಳಿರುವ ಸರ್ಕಾರ, “ಚಿಲ್ ಗೈಸ್, ನಿಮ್ಮ ಭರವಸೆಯನ್ನು ಹೆಚ್ಚು ಹೆಚ್ಚಿಸಬೇಡಿ” ಎಂದು ಹೇಳಿದೆ. ಈ ಮೂಲಕ ಪೈಪ್ ಲೈನ್ ನಲ್ಲಿ ಮದ್ಯದ ಕನಸು ಕಂಡವರ ಮೇಲೆ ತಣ್ಣೀರೆರಚಿದಂತಾಗಿದೆ.

Home add -Advt

Related Articles

Back to top button