ಅಧ್ಯಾಪಕರು ತಮ್ಮ ಕರ್ತವ್ಯವನ್ನು ಸೇವೆ ಎಂದು ತಿಳಿಯಲಿ: ಸ್ವಾಮಿ ಮೋಕ್ಷಾತ್ಮಾನಂದಜಿ ಮಹಾರಾಜ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಧ್ಯಾಪಕರು ತಮ್ಮ ಕೆಲಸವನ್ನು ವೃತ್ತಿ ಅಥವಾ ಕರ್ತವ್ಯ ಎಂದು ತಿಳಿಯದೆ ಸೇವೆ ಎಂದು ಪರಿಗಣಿಸಬೇಕು ಎಂದು ಕಿಲ್ಲಾದ ರಾಮಕೃಷ್ಣ ಮಿಶನ್ ಆಶ್ರಮ ಸ್ವಾಮಿ ಮೋಕ್ಷಾತ್ಮಾನಂದಜಿ ಮಹಾರಾಜ ನುಡಿದರು.
ಅವರು, ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಐಕ್ಯೂಎಸಿ ವತಿಯಿಂದ ಜು.23ರವರೆಗೆ ಐದು ದಿನಗಳ ಕಾಲ ಆಯೋಜಿಸಲಾಗಿರುವ ಅಧ್ಯಾಪಕರ ಆಭಿವೃದ್ಧಿ ಕಾರ್ಯಕ್ರಮವನ್ನು ಮಂಗಳವಾರದ ಉದ್ಘಾಟಿಸಿ ‘ಸೇವೆ ಮತ್ತು ಅದರ ರೂಪಾಂತರದ ಶಕ್ತಿ’ ಎಂಬ ವಿಷಯದ ಕುರಿತು ಮಾತನಾಡಿದರು.
ಅಧ್ಯಾಪಕರು ಜ್ಞಾನವಂತರು, ಚಾರಿತ್ರ್ಯವಂತರಾಗಿರಬೇಕು, ಸರಳ ನಡೆನುಡಿ ಮತ್ತು ಸರಳ ಉಡುಗೆ ಧರಿಸಬೇಕು ಮತ್ತು ಸಂಸ್ಕಾರವಂತರಾಗಿರಬೇಕೆಂದು ಹೇಳಿದರು. ಇದೇ ವೇಳೆ ಧ್ಯಾನದ ವಿಧಾನಗಳನ್ನು ಅವರು ವಿವರಿಸಿದರು.
ಪ್ರಾಚಾರ್ಯೆ ಡಾ. ಜ್ಯೋತಿ ಎಸ್. ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಕಾವ್ಯ ಹೆಗಡೆ ಪ್ರಾರ್ಥಿಸಿದರು. ವಿ.ಕೆ. ಗಾಣಿಗೇರ ಪರಿಚಯಿಸಿದರು. ಡಾ. ಕೀರ್ತಿ ಬ್ಯಾಡಗಿ ವಂದಿಸಿದರು. ಸಮೃದ್ಧಿ ಬರವೆ ನಿರೂಪಿದರು.
ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ಸರ್ಜನ್ ನಿಯೋಜನೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ