Latest

ರಾಷ್ಟ್ರೀಯ ಇಂಡಿಯನ್ ಮಿಲಟರಿ ಕಾಲೇಜಿ ಡೆಹರಾಡೂನ್ : 8ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಅಭ್ಯರ್ಥಿಗಳು/ವಿದ್ಯಾರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಮತ್ತು ಜುಲೈ ೦೧, ೨೦೨೩ ರಂತೆ ೧೧ಳಿ ವರ್ಷದಿಂದ ೧೩ ವರ್ಷದೊಳಗಿರುವ (ಅಂದರೆ ಜುಲೈ ೦೨, ೨೦೧೦ ರಿಂದ ಜನವರಿ ೦೧, ೨೦೧೨ ರೊಳಗೆ ಜನಿಸಿರುವ) ಬಾಲಕರಿಂದ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಜನೆವರಿ ೨೦೨೩ನೇ ಅಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಟರಿ ಕಾಲೇಜನಲ್ಲ್ಲಿ ೮ನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ ೦೩ ರಂದು ನಡೆಸಲಾಗುವುದು.
ಈ ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಈ ನಿಟ್ಟಿನಲ್ಲಿ ಯುವಕರಿಗೆ ಸರ್ವ ರೀತಿಯ ವಿದ್ಯಾಭ್ಯಾಸ/ತರಬೇತಿ ನೀಡುವುದು. ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ೧೦೭೫೦೦ ರೂಪಾಯಿ (Gen Cat) ಹಾಗೂ ೯೩೯೦೦ ರೂಪಾಯಿ (SC/ST) ಆಗಿರುತ್ತದೆ. ಇದು ಕಾಲ ಕಾಲಕ್ಕೆ ಹೆಚ್ಚಾಗಬಹುದು. ವಿಧ್ಯಾರ್ಥಿಯು ಪ್ರವೇಶ ನೀಡುವಾಗ ೩೦,೦೦೦ ರೂ. ಭದ್ರತಾ ಠೇವಣಿ ನೀಡಬೇಕಾಗುತ್ತದೆ (incl in annual fee). ಸದರಿ ಮೊತ್ತವನ್ನು ವಿಧ್ಯಾರ್ಥಿಯು ಪದವೀಧರನಾದ ಬಳಿಕ ಹಿಂತಿರುಗಿಸಲಾಗುವುದು.
ಅರ್ಜಿ ನಮೂನೆಗಳನ್ನು ಪಡೆಯುವ ವಿಧಾನ : ಪ್ರಾಸ್ಪಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ರಾಷ್ಟೀಯ ಭಾರತೀಯ ಮಿಲಿಟರಿ ಕಾಲೇಜ, ಗರಹಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ, ಪಿನ್-೨೪೮೦೦೩ ಮೂಲಕ ಪಡೆಯಬಹುದು.
ಆನ್‌ಲೈನ್ ಪಾವತಿ : ಸಾಮಾನ್ಯ ಅಭ್ಯರ್ಥಿಗಳಿಗೆ ೬೦೦ ರೂ. ಮತ್ತು ಎಸ್ಸಿ /ಎಸ್ಟಿ ಅಭ್ಯರ್ಥಿಗಳಿಗೆ ೫೫೫ ರೂ. ಆನ್‌ಲೈನ್ ಪಾವತಿ ಮಾಡುವ ಮೂಲಕ ಪ್ರಾಸ್ಪಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕಗಳನ್ನು ಸಹ ಪಡೆಯಬಹುದು. ವೆಬ್ ಸೈಟ್ www.rimc.gov.in. ಪಾವತಿ ಸ್ವೀಕರಿಸಿದ ನಂತರ ಪ್ರಾಸ್ಪಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕಗಳನ್ನು ಸ್ಪೀಡ ಪೋಸ್ಟ ಮೂಲಕ ರವಾನಿಸಲಾಗುತ್ತದೆ.
ಪ್ರಾಸ್ಪಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ೬೦೦ ರೂ.ಗಳ ಬೇಡಿಕೆಯ ಕರಡು ಮತ್ತು ಎಸ್ಸಿ /ಎಸ್ಟಿ ಅಭ್ಯರ್ಥಿಗಳಿಗೆ ೫೫೫ ರೂ.ಗಳ ಬೇಡಿಕೆಯ ಕರಡು ಕಳುಹಿಸಿ ಲಿಖಿತ ವಿನಂತಿಯ ಪರವಾಗಿ ಜಾತಿ ಪ್ರಮಾಣ ಪತ್ರದೊಂದಿಗೆ ಕಳುಹಿಸಬಹುದು. THE COMMANDANT RIMC DEHRADUN” DRAWEE BRANCH AT SBI. TEL BHAVAN, DEHRADUN (BANK CODE NO-01576) ಉತ್ತರಾಖಂಡ್. ವಿಳಾಸ, ಪಿನ್ ಕೋಡ್ ಮತ್ತು ಸಂಪರ್ಕ ಸಂಖ್ಯೆಯೊಂದಿಗೆ ದೊಡ್ಡ ಅಕ್ಷರಗಳಲ್ಲಿ ಟಾಯಿಪ್ ಮಾಡಿ ಬರೆಯಬೇಕು. ಕಾನೂನು ಬಾಹಿರ ಅಥವಾ ಅಪೂರ್ಣ ವಿಳಾಸದಿಂದ ಉಂಟಾಗುವ ಪ್ರಾಸ್ಪಕ್ಟಸ್ ನ ಸಾಗಾಣಿಕಯಲ್ಲಿ ಯಾವುದೇ ಅಂಚೆ ವಿಳಂಬ ಅಥವಾ ನಷ್ಟಕ್ಕೆ ಖಒಅ ಸಂಸ್ಥೆಯು ಜವಾಬ್ದಾರರಾಗಿರುವುದಿಲ್ಲ.
ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಅಕ್ಟೊಂಬರ್ ೧೫, ೨೦೨೨ ರೊಳಗಾಗಿ ನಿರ್ದೆಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಭವನ, ನಂ ೫೮ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ರಸ್ತೆ, ಬೆಂಗಳೂರು-೫೬೦೦೨೫, ಇವರಿಗೆ, ಕಂಡಿಕೆ (೨)ರಲ್ಲಿ ತಿಳಿಸಿರುವ ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಮುನ್ಸಿಪಾಲಿಟಿ/ಗ್ರಾಮ ಪಂಚಾಯತ್ ಪ್ರಾಧಿಕಾರ ವತಿಯಿಂದ ಆಂಗ್ಲ ಭಾಷೆಯಲ್ಲಿ ಪಡೆದ ಅಭ್ಯರ್ಥಿಯ ಜನ್ಮ ಪ್ರಮಾಣ ಪತ್ರದ ಧೃಢೀಕೃತ ಪ್ರತಿ. ೦೩ ಪಾಸಪೋರ್ಟ್ ಸೈಜಿನ ಭಾವಚಿತ್ರಗಳು. (ಅರ್ಜಿಗಳಲ್ಲಿ ಅಂಟಿಸಿದ ಭಾವಚಿತ್ರವನ್ನು ಸೇರಿಸಿ), ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ಧೃಢೀಕೃತ ಪ್ರತಿ (ಆಂಗ್ಲ ಭಾಷೆಯಲ್ಲಿ ಇರುವಂತೆ ಮಾತ್ರ). ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ/ನೊಂದಾಯಿತ ಅಂಚೆದ್ವಾರ ರವಾನಿಸಲು ೪೨ ರೂ. ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಲಕೋಟೆ.
ಶಾಲಾ ಪ್ರಾಚಾರ್ಯರು/ಮುಖ್ಯೋಪಾದ್ಯಾಯರಿಂದ ಅಭ್ಯರ್ಥಿ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪತ್ರ ಮೂಲ ಪ್ರತಿ (ಧೃಢೀಕರಿಸಿದ ಅಭ್ಯರ್ಥಿ ಭಾವ ಚಿತ್ರದೊಂದಿಗೆ). ಈ ರಾಜ್ಯದ ವಾಸಸ್ಥಾನ ಧೃಡೀಕರಣ ಪತ್ರ (ತಹಸೀಲ್ದಾರರಿಂದ), ಆಧಾರ ಕಾರ್ಡನ್ ಪ್ರತಿಗಳು (ಎರಡು ಕಡೆ) ಕಡ್ಡಾಯ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೦-೨೫೫೮೯೪೫೯ ಅಥವಾ ಸಮೀಪದಲ್ಲಿರುವ ಜಂಟಿ/ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಬೆಳಗಾವಿ ಇವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button