ಪ್ರಗತಿವಾಹಿನಿ ಸುದ್ದಿ; ಚೆನ್ನೈ: ತಮಿಳುನಾಡಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಭೀಕರ ಅಪಘಾತಕ್ಕೀಡಾದ ಘಟನೆ ವೆಪ್ಪೋರ್ ಬಳಿ ನಡೆದಿದೆ.
ವಿದ್ಯಾರ್ಥಿನಿ ಮೃತದೇಹವನ್ನು ಸ್ವಗ್ರಾಮಕ್ಕೆ ಸಾಗಿಸುತ್ತಿದ್ದಾಗ ತಿರುಚ್ಚಿ ಬೈಪಾಸ್ ರಸ್ತೆಯಲ್ಲಿ ವೆಪ್ಪೂರ್ ಬಳಿ ಕಂಟೈನರ್ ಲಾರಿಗೆ ಆಂಬುಲೆನ್ಸ್ ಹಾಗೂ ಬೆಂಗಾವಲು ವಾಹನ ಡಿಕ್ಕಿಹೊಡೆದಿದೆ. ವಾಹನದಲ್ಲಿದ್ದವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶಿಕ್ಷಕರ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಜುಲೈ 13ರಂದು ಕಲ್ಲುಕುರುಚಿಯ ಕಣಿಯಮೂರು ಕಾಲೇಜಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ವಿದ್ಯಾರ್ಥಿನಿ ಮೃತದೇಹ ಸ್ವೀಕಾರಕ್ಕೆ ಪೋಷಕರು ಒಪ್ಪಿರಲಿಲ್ಲ. ಮರು ಮರಣೋತ್ತರ ಪರೀಕ್ಷೆಗಾಗಿ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇಂದು ಸ್ವಗ್ರಾಮಕ್ಕೆ ಮೃತದೇಹ ಸಾಗಿಸುವಾಗ ಆಂಬುಲೆನ್ಸ್ ಅಪಘಾತವಾಗಿದೆ.
ಮತ್ತೆ ಕರೆಂಟ್ ಶಾಕ್ ನೀಡಲು ಮುಂದಾದ ಕೇಂದ್ರ ಸರ್ಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ