
ಪ್ರಗತಿವಾಹಿನಿ ಸುದ್ದಿ, ಪಟಿಯಾಲಾ: ಯೂಟ್ಯೂಬರ್ ಭೇಟಿ ಮಾಡಲು 13 ವರ್ಷದ ಬಾಲಕನೊಬ್ಬ 250 ಕಿ.ಮೀ. ಸೈಕಲ್ ತುಳಿದಿದ್ದಾನೆ.
ಪಂಜಾಬ್ ನ ಪಟಿಯಾಲಾದ ವೀರೇಶ್ ಭೂಷಣ್ ಎಂಬಾತ ಈ ಸಾಹಸಕ್ಕಿಳಿದ ಬಾಲಕ. ಯೂಟ್ಯೂಬರ್ ನಿಶ್ಚಯ್ ಮಲ್ಹಾನ್ (ಟ್ರಿಗರ್ಡ್ ಇನ್ಸಾನ್) ಅವರ ಅಭಿಮಾನಿಯಾಗಿದ್ದ ಬಾಲಕ ಅ.4ರಂದು ಪಟಿಯಾಲಾದಿಂದ ನವದೆಹಲಿಯ ಪಿತಂಪುರಕ್ಕೆ 250 ಕಿ.ಮೀ. ಸೈಕಲ್ ನಲ್ಲಿ ಹೊರಟಿದ್ದಾನೆ.
ಇತ್ತ ಕುಟುಂಬದವರು ಈತನನ್ನು ಹುಡುಕಿ ಹೈರಾಣಾಗಿ ಕೊನೆಗೆ ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಟಿಯಾಲಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡು ಈ ಬಗ್ಗೆ ಯಾವುದೇ ಮಾಹಿತಿಯಿದ್ದರೆ ಸೈಬರ್ ಕ್ರೈಮ್ ಸೆಲ್‌ಗೆ ತಿಳಿಸುವಂತೆ ಜನರನ್ನು ವಿನಂತಿಸಿದ್ದರು.
ಆದರೆ ನಿಶ್ಚಯ್ ಮಲ್ಹಾನ್ ದುಬೈನಲ್ಲಿರುವುದು ಬಾಲಕನಿಗೆ ತಿಳಿದಿರಲಿಲ್ಲ. ಇದೀಗ ಬಾಲಕನನ್ನು ಪತ್ತೆಹಚ್ಚಿ ಮನೆಗೆ ಕರೆತರಲಾಗಿದೆ. ಈ ವಿಷಯವನ್ನು ನಿಶ್ಚಯ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದು ಬಾಲಕ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಿದ್ದಾರೆ.
ಗುಡುಗು, ಸಿಡಿಲು ಸಹಿತ ಭಾರಿ ಮಳೆ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ