Latest

ರಣರಂಗದಲ್ಲಿ ಒಂಟಿಯಾಗಿ ಸಾವಿರ ಕಿಲೋಮೀಟರ್ ಪ್ರಯಾಣಿಸಿದ ಬಾಲಕ; ತಂದೆ, ತಾಯಿ ಪುಟ್ಟ ಮಗನನ್ನು ಕಳಿಸಿದ್ದಾದರೂ ಏಕೆ? ಓದಿ ಕರುಣಾಜನಕ ಕಥೆ

ಹೀರೋ ಆಫ್ ದಿ ನೈಟ್ ಎಂದು ಬಣ್ಣಿಸಿದ ಸ್ಲೋವಾಕಿಯಾ ಸರಕಾರ

A boy who traveled a thousand kilometers alone on the battlefield; Father and Mother sent a little son but why? Read a pathetic story

ಕೀವ್ – ೧೧ ವರ್ಷದ ಬಾಲಕ ಬರೋಬ್ಬರಿ ಸಾವಿರ ಕಿಲೋಮೀಟರ್ ಪ್ರಯಾಣಿಸಿ ಉಕ್ರೇನ್‌ನ ರಣರಂಗದಿಂದ ಪಕ್ಕದ ಸ್ಲೋವಾಕಿಯಾ ದೇಶದ ಗಡಿ ತಲುಪಿದ್ದಾನೆ. ಈತನನ್ನು ಸ್ಲೋವಾಕಿಯಾದ ಸಚಿವಾಲಯ ಹೀರೊ ಆಫ್ ದ ಲಾಸ್ಟ್ ನೈಟ್ ಎಂದು ಬಣ್ಣಿಸಿದೆ.

ಉಕ್ರೇನ್‌ನ ಝಪೋರಿಜಿಯಾ ಪ್ರದೇಶವನ್ನು ರಷ್ಯಾ ಸೈನ್ಯ ವಶಕ್ಕೆ ಪಡೆದಿದೆ. ಇಲ್ಲಿ ಅಣುಸ್ಥಾವರವೂ ಇದೆ. ಈ ಕಾರಣಕ್ಕೆ ಝಪೋಜಿಯಾದ ಜನ ಭಯಭೀತರಾಗಿ ಪಲಾಯನಗೈಯ್ಯುತ್ತಿದ್ದಾರೆ.

ಊರಿನಿಂದ ಹೊರಡಲಾಗದ ಬಾಲಕನ ತಾಯಿ, ತಂದೆ, ತಮ್ಮ ಮಗನಾದರೂ ಉಳಿಯಲಿ ಎಂದು ಬಾಲಕನ ಬೆನ್ನಿಗೆ ಒಂದು ಬ್ಯಾಗ್ ಹಾಕಿ, ಪಾಸ್ ಪೋರ್ಟ್ ಸ್ವಲ್ಪ ತಿಂಡಿ, ತಿನಿಸು ಮತ್ತು ನೀರಿನ ಬಾಟಲ್ ತುಂಬಿ, ಕೈ ಮೇಲೆ ಫೋನ್ ನಂಬರ್ ಬರೆದು ಹೋಗುವಂತೆ ಕಳುಹಿಸಿದ್ದರು.

ರೈಲಿನ ಮೂಲಕ ಸ್ಲೋವಾಕಿಯಾದೆಡೆಗೆ ಪ್ರಯಾಣಿಸಿದ ಬಾಲಕ ದಾರಿಯಲ್ಲಿ ಸ್ವಯಂ ಸೇವಕರಿಂದ ಆಹಾರ ಆಶ್ರಯ ಪಡೆಯುತ್ತ ಸಾಗಿದ್ದಾನೆ. ಇಡೀ ಪ್ರಯಾಣದುದ್ದಕ್ಕೂ ಬಾಲಕನ ನಗುಮೊಗ ಜನರ ಹೃದಯ ಗೆದ್ದಿದೆ.

Home add -Advt

ಸಂಬಂಧಿಗಳಿದ್ದರು

ಸ್ಲೋವಾಕಿಯಾದಲ್ಲಿ ಈ ಬಾಲಕನ ಸಂಬಂಧಿಗಳಿದ್ದಾರೆ. ಭಾನುವಾರ ರಾತ್ರಿ ಸ್ಲೋವಾಕಿಯಾ ಗಡಿ ತಲುಪಿದಾಗ ಬಾಲಕನ ನಗುಮೊಗಕ್ಕೆ ಗಡಿ ರಕ್ಷಣಾ ಪಡೆಯ ಯೋಧರೂ ಸಹ ಸೋತಿದ್ದಾರೆ. ಆತನ ಕೈ ಮೇಲೆ ಬರೆಯಲಾಗಿದ್ದ ಫೋನ್ ನಂಬರ್ ಸ್ಲೋವಾಕಿಯಾದ ಆತನ ಸಂಬಂಧಿಗಳದ್ದೆಂದು ತಿಳಿದು ಬಂದು ಅವರಿಗೆ ಫೋನ್ ಮಾಡಿದ್ದಾರೆ. ಬಳಿಕ ಸಂಬಂಧಿಗಳು ಬಂದು ಬಾಲಕನನ್ನು ಕರೆದೊಯ್ದಿದ್ದಾರೆ. ಯುದ್ಧ ಭೂಮಿಯಲ್ಲಿ ಒಂದು ಸಾವಿರ ಕಿಲೋಮೀಟರ್ ದೂರವನ್ನು ಒಂಟಿಯಾಗಿ ಪಯಣಿಸಿದ ಬಾಲಕನ ಧೈರ್ಯಕ್ಕೆ ಮೆಚ್ಚಿದ ಸ್ಲೋವಾಕಿಯಾ ಸಚಿವಾಲಯ ಆತನನ್ನು ಹೀರೋ ಆಫ್ ದ ನೈಟ್ ಎಂದು ಬಣ್ಣಿಸಿದೆ.

 

Related Articles

Back to top button