ಪ್ರಗತಿವಾಹಿನಿ ಸುದ್ದಿ -ಬೈಲಹೊಂಗಲ:
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಿರಿಯಾಲ ಗ್ರಾಮದಲ್ಲಿನ ರಸ್ತೆಯು ತುಂಬಾ ಹಾಳಾಗಿದ್ದು, ಜನರಿಗೆ ಸಂಚರಿಸುವಾಗ ತುಂಬಾ ಸಮಸ್ಯೆಯಾಗಿದೆ.
ಇಂದು ಮಧ್ಯಾಹ್ನ ಸರ್ಕಾರಿ ಬಸ್ ವೊಂದು ತಿಗಡಿ ಮತ್ತು ಬೆಳಗಾವಿಗೆ ಸಂಚರಿಸುವ ಸಂದರ್ಭದಲ್ಲಿ ಗಿರಿಯಾಲ ಗ್ರಾಮದ ರಸ್ತೆಯಲ್ಲಿ ಸಿಲುಕಿ ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಬಸ್ ನಲ್ಲಿದ್ದ ಗ್ರಾಮಸ್ಥರೆಲ್ಲ ಸೇರಿ ರಸ್ತೆಯ ಮೇಲೆ ನಿಂತಿರುವ ಬಸ್ ನ್ನು ಮುಂದೆ ದೂಡಲು ಹರಸಾಹಸ ನಡೆಸಿದರು.
ಒಂದು ವರ್ಷದ ಹಿಂದೆ ಈ ರಸ್ತೆಗೆ ಅನುದಾನ ಬಿಡುಗಡೆಯಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪಂಚಾಯತ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿ ರೈತರು, ಹಿರಿಯರು, ಶಾಲಾ-ಕಾಲೇಜು ವಿಧ್ಯಾರ್ಥಿಗಳು, ಬೈಕ್ ಚಾಲಕರು ಸಂಚರಿಸಲು ತೊಂದರೆಯಾಗಿದೆ. ಅಪಘಾತವಾಗುವ ಮುಂಚೆಯೇ ಅಧಿಕಾರಿಗಳು ರಸ್ತೆಯನ್ನು ಸುಧಾರಣೆ ಮಾಡುವಲ್ಲಿ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ