ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆ. 10 ರಂದು ಬೆಳಗಾವಿ ಶಹಾಪುರದ ಸರಸ್ವತಿ ಗ್ರಂಥಾಲಯದಲ್ಲಿ ಸಂಜೆ 5:30 ಕ್ಕೆ ದೃಷ್ಟಿ ವಿಕಲಚೇತನರಿಗಾಗಿ ನಾದ್ ಸ್ಪರ್ಶ್ ಮ್ಯೂಸಿಕ್ ಫೌಂಡೇಶನ್ ವತಿಯಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಗಾವಿಯ ಖ್ಯಾತ ತಬಲಾ ವಾದಕರಾದ ಸಂತೋಷ ಪುರಿಯವರಿಂದ ಪ್ರೇರಿತರಾಗಿ ಅಂಧ ಕಲಾವಿದರಿಗಾಗಿ ಈ ಸಂಸ್ಥೆಯು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಮುಧೋಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಮಾರ್ ಬಡಿಗೇರ್ ಅವರ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲಾಗುವುದು. ಕುಮಾರ್ ಬಡಿಗೇರ್ ಅವರು ಸಂಗೀತ ಶಾಸ್ತ್ರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಸುಲಭ ಸಂಗೀತದಲ್ಲಿ ಆಕಾಶವಾಣಿಯ ಬಿ ಗ್ರೇಡ್ ವಿಭಾಗದಲ್ಲಿ ತೇರ್ಗಡೆಯಾಗಿದ್ದಾರೆ.
ಡಾ. ಸುಧಾಂಶು ಕುಲಕರ್ಣಿ, ವಿಜಯ್ ಶಿರಸತ್, ಬಸವರಾಜ ಹಡಪದ್ ಮತ್ತು ಸ್ಮಿತಾ ಮಿಟಗಾರ ಅವರಲ್ಲಿ ವ್ಯಾಸಂಗ ಮಾಡಿದರು. ಕಿತ್ತೂರು ಉತ್ಸವ, ಬೆಳವಾಡಿ ಉತ್ಸವ ಮತ್ತು ಇತರ ಅನೇಕ ಉತ್ಸವಗಳಲ್ಲಿ ಅವರ ಗಾಯನವನ್ನು ಪ್ರದರ್ಶಿಸಲಾಗಿದೆ. ಇವರೊಂದಿಗೆ ಸಂವಾದಿನಿ ಸಾಥ್ ಸಂತೋಷ್ ಪುರಿ ಮತ್ತು ತಬಲಾ ಸಾಥ್ ಅತೀಶ್ ಖೋರಗಡೆ ಇರುತ್ತಾರೆ. ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ