*ಸಚಿವ ಎಂ.ಬಿ ಪಾಟೀಲ್ ನೇತೃತ್ವದ ನಿಯೋಗದಿಂದ 10 ದಿನ ವಿದೇಶ ಪ್ರವಾಸ*

ಪ್ರಗತಿವಾಹಿನಿ ಸುದ್ದಿ: ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗವು ಇಂದಿನಿಂದ 10 ದಿನ ವಿದೇಶ ಪ್ರವಾಸ ಕೈಗೊಂಡಿದೆ.
ಇಂದು ರಾತ್ರಿ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಿಂದ ತೆರಳುವ ನಿಯೋಗ ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಿದೆ. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಇತರೆ ಉನ್ನತ ಅಧಿಕಾರಿಗಳು ಸಹ ಸಚಿವರ ನಿಯೋಗದಲ್ಲಿ ಇರಲಿದ್ದಾರೆ.
2 ದೇಶಗಳ ಪ್ರಮುಖ ಉದ್ಯಮಿಗಳಿಗೆ ಆಹ್ವಾನ ನೀಡಲಿರುವ ನಿಯೋಗ, 2 ದೇಶಗಳ ಪ್ರಮುಖ ಕಂಪನಿಗಳಿಗೆ ರಾಜ್ಯದಲ್ಲಿನ ಉದ್ಯಮ ಸ್ನೇಹಿ ವಾತಾವರಣ ಮನದಟ್ಟು ಮಾಡುವ ಪ್ರಯತ್ನ ಮಾಡಲಿದೆ. 27ಕ್ಕೂ ಹೆಚ್ಚು ಕಂಪನಿಗಳ ಜೊತೆ ನಿಯೋಗ ಸಮಾಲೋಚನೆ ನಡೆಸಲಿದೆ. ಜೊತೆಗೆ ಟೋಕಿಯೋ ಮತ್ತು ಸೋಲ್ನಲ್ಲಿ ನಿಯೋಗ ರೋಡ್ಶೋ ನಡೆಸಲಿದೆ.
ರಾಜ್ಯದಲ್ಲಿ ವರಮಾನ ಸಂಗ್ರಹ ಹೆಚ್ಚಳಕ್ಕೆ ಇರುವ ಅವಕಾಶಗಳ ಕುರಿತು ಹಣಕಾಸು ಇಲಾಖೆಗೆ ಸಲಹೆ ನೀಡಲು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಕಂಪನಿಯನ್ನು ಸರ್ಕಾರ ನೇಮಿಸಿದೆ. ಈ ಕಂಪನಿ ಇತ್ತೀಚೆಗೆ ಪ್ರಾಥಮಿಕ ವರದಿಯೊಂದನ್ನು ಸಲ್ಲಿಸಿದ್ದು, ಜಮೀನುಗಳ ನಗರೀಕರಣ ಅಥವಾ ರಾಜ್ಯ ನಿರ್ದೇಶಿತ ನಗರೀಕರಣ ಮಾದರಿಗಳ ಮೂಲಕ ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ಕೂಡ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ