National

*ನಕಲಿ ಪೊಲೀಸ್ ಆಂಟಿಯ ಮುಖವಾಡ ಬ್ಯೂಟಿ ಪಾರ್ಲರ್ ನಲ್ಲಿ ಬಟಾ ಬಯಲು*

ಪ್ರಗತಿವಾಹಿನಿ ಸುದ್ದಿ: ಗಂಡನನ್ನು ಬಿಟ್ಟು, ಲವರ್ ಜೊತೆ ಸೇರಿಕೊಂಡು ತಾನು ಸಬ್ ಇನ್ಸ್ ಪೆಕ್ಟರ್ ಎನ್ನುತ್ತಾ ಸಿಕ್ಕ ಸಿಕ್ಕಲ್ಲಿ ಅವಾಜ್ ಹಾಕಿ ಅಲೆದಾಡುತ್ತಿದ್ದ ನಕಲಿ ಪೊಲೀಸ್ ಆಂಟಿಯ ಅಸಲಿ ಬಣ್ಣ ಬ್ಯೂಟಿ ಪಾರ್ಲರ್ ನಲ್ಲಿ ಬಯಲಾಗಿದೆ. 

ಚೈನ್ನೈನ ಮಧುರೈ ಮೂಲದ ಥೇನಿ ಪೆರಿಯಕುಲಂನ ನಿವಾಸಿ ಅಭಿಪ್ರಭಾ (34) ಎಂಬ ಆರೋಪಿ, ವಂಚನೆ ಮತ್ತು ಪೊಲೀಸರ ಸೋಗು ಹಾಕಿದ ಆರೋಪದಡಿ ಇದೀಗ ಖಾಕಿ ಬಲೆಗೆ ಬಿದ್ದಿದ್ದಾಳೆ. ಎಂದಿನಂತೆ ಪೊಲೀಸ್ ಸೊಗಿನಲ್ಲಿ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ನ ಬ್ಯೂಟಿಪಾರ್ಲರ್ ಗೆ ತೆರಳಿದ್ದ ಅಭಿಪ್ರಭಾ ಫೇಶಿಯಲ್ ಮಾಡಿಸಿದ್ದಾಳೆ. ಬಳಿಕ ದುಡ್ಡು ಕೊಡಲ್ಲ, ನಾನ್ಯಾರು ಗೊತ್ತಿಲ್ವಾ. ನಾನು ಪೊಲೀಸ್ ಎಂದು ಅವಾಜ್ ಹಾಕಿ ಹೋಗಿದ್ದಾಳೆ. ಅವಳ ಮಾತಿನ ಧಾಟಿಯಿಂದ ಅನುಮಾನಗೊಂಡ ಪಾರ್ಲ‌ರ್ ನ ವೆಂಕಟೇಶ್ ಎಂಬುವವರು ದೂರು ನೀಡಿದ್ದಾರೆ. ತನಿಖೆ ಮಾಡಿದ ಖಾಕಿ ಟೀಂ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಈ ವೇಳೆ ಅವಳನ್ನು ವಿಚಾರಣೆಗೆ ಒಳಪಡಿಸಿದಾಗ ಅನೇಕರಿಗೆ ಅಭಿಪ್ರಭಾ ಪೊಲೀಸರ ಸೋಗಿನಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆಕೆಯ ಮೊಬೈಲ್‌ ಪರಿಶೀಲಿಸಿದ್ದ ಪೊಲೀಸರಿಗೆ, ವಿವಿಧ ನಗರಗಳಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಡಿಫರೆಂಟ್ ಫೋಸ್‌ನಲ್ಲಿ ವೈರೈಟಿ ಫೋಟೋಗಳನ್ನು ಅಭಿಪ್ರಭಾ ಸೆರೆಹಿಡಿದಿರುವುದು ಕಂಡುಬಂದಿದೆ.

Home add -Advt

Related Articles

Back to top button