Belagavi NewsBelgaum NewsKannada NewsKarnataka NewsLatestUncategorized

ಮಗನನ್ನೇ ಮರ್ಡರ್ ಮಾಡಿದ ತಂದೆ; ಸಾಥ್ ಕೊಟ್ಟವರ್ಯಾರು? ಕೊಂದಿದ್ದೇಕೆ? ಓದಿ ಈ ಸುದ್ದಿ

ಪ್ರಗತಿವಾಹಿನಿ ಸುದ್ದಿ, ಹಾರೂಗೇರಿ: ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿಡಕಲ್ ನಲ್ಲಿ ತಂದೆಯೇ ಮಗನನ್ನು ಹೊಡೆದು ಕೊಲೆ ಮಾಡಿದ್ದಾನೆ. ಇದಕ್ಕೆ ಮತ್ತೊಬ್ಬ ಮಗ ಸಾಥ್ ನೀಡಿದ್ದಾನೆ.

ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಕೊಲೆಯಾದ ಯುವಕ. ತಂದೆ ಮಹಾಲಿಂಗಯ್ಯ ಹಿರೇಮಠ (54) ಮತ್ತು ಸಹೋದರ ಬಸಯ್ಯ ಹಿರೇಮಠ (26) ಆರೋಪಿಗಳು.

ಪ್ರತಿ ನಿತ್ಯ ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಮಗನ ತಲೆಗೆ ಹೊಡೆದು ಕೊಂದು ಹಾಕಿದ್ದಾನೆ. ನಂತರ ಮನೆಯ ಹಿಂದೆಯೇ ಅಂತ್ಯ ಸಂಸ್ಕಾರ ಮಾಡಲಾಗಿತ್ತು.

ಗ್ರಾಮಸ್ಥರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅಳಿದುಳಿದ ಮೃತ ದೇಹದ ಭಾಗಗಳನ್ನು ಮುಂದಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button