Belagavi NewsBelgaum NewsKannada NewsKarnataka NewsNational
*ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: ಗ್ರಾಮದಲ್ಲಿ ಬಿಗುವಿನ ವಾತಾವರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಾಗ ವಿವಾದ ಹಿನ್ನೆಲೆ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯಲ್ಲಿ ನಡೆದಿದೆ.
ಜಾಗದ ವಿಚಾರವಾಗಿ ಮಾರುತಿ ವಣ್ಣೂರೆ ಹಾಗೂ ಪರಸಪ್ಪಾ ಹೋಳಿಕಾರ ಕುಟುಂಬ ಮಧ್ಯೆ ವಿವಾದ ಇತ್ತು. ಇಂದು ಮಾತಿಗೆ ಮಾತು ಬೆಳೆದು ವಾಗ್ವಾದ ತಾರಕಕ್ಕೇರಿ ಮನೆಯ ಛಾವಣಿ ಮೇಲೆ ಹತ್ತಿ ಹೆಂಚು ಹಾಗೂ ಕಲ್ಲು ತೂರಾಟ ನಡೆಸಲಾಗಿದೆ.
ಕಲ್ಲ ತೂರಿ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆಸಲಾಗಿದೆ. ಈ ವೇಳೆ ನಿಂಗವ್ವಾ ವಣ್ಣೂರೆ ಮೇಲೆ ಹಲ್ಲೆ ಸ್ಥಿತಿ ಗಂಭೀರವಾಗಿದೆ.
ಪರಸಪ್ಪಾ, ಭರಮಪ್ಪಾ, ಅಪ್ಪಣ್ಣ, ಹೋಳಿಕಾರ ಸಹೋದರರಿಂದ ಹಲ್ಲೆ ಆರೋಪ ಮಾಡಲಾಗಿದೆ. ವಂಟಮೂರಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಕಾಕತಿ ಪೋಲಿಸರು ದೌಡಾಯಿಸಿದ್ದಾರೆ.