
ಪ್ರಗತಿವಾಹಿನಿ ಸುದ್ದಿ: 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಗೋರಖ್‌ಪುರದಲ್ಲಿ ನಡೆದಿದೆ. ಈ ಸಂಬಂಧ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮದರಸಾ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮೌಲ್ವಿ ರಹಮತ್ ಅಲಿ ಗೋರಖ್‌ಪುರದ ಉರುವಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಪಾಠ ಮಾಡುತ್ತಿದ್ದರು. ಬಾಲಕಿ ದಿನನಿತ್ಯದಂತೆ ಸೋಮವಾರ ಬೆಳಗ್ಗೆ ಓದಲು ಹೋಗಿದ್ದಳು. ತರಗತಿಗಳು ಪ್ರಾರಂಭವಾದ ಸುಮಾರು ಎರಡೂವರೆ ಗಂಟೆಗಳ ನಂತರ, ಅಲಿ ಇತರ ಮಕ್ಕಳನ್ನು ಮನೆಗೆ ಕಳುಹಿಸಿದನು. ಆಕೆಯನ್ನು ಹಿಡಿದು ಕೊಲೆ ಮಾಡುವುದಾಗಿ ಹೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹುಡುಗಿ ಮನೆಗೆ ಬಂದಾಗ ಎಲ್ಲ ವಿಷಯವನ್ನು ತಾಯಿಯ ಜೊತೆ ಹೇಳಿಕೊಂಡಿದ್ದಾಳೆ. ವಿಷಯವನ್ನು ತಿಳಿದ ಕುಟುಂಬದವರು ಮತ್ತು ಊರಿನವರು ಶಿಕ್ಷಕನಿಗೆ ಥಳಿಸಿ, ಆಮೇಲೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ದಾಖಲಿಸಿ ಆಕೆಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ