Belagavi NewsBelgaum NewsKannada NewsKarnataka NewsLatest

ಬೆಳಗಾವಿಯಲ್ಲಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಯುವಕರ ಗುಂಪು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ದಾರವಾಡದಿಂದ ಬೈಲಹೊಂಗಲಕ್ಕೆ ಬಂದಿದ್ದ ಬಸ್ ಇದಾಗಿದ್ದು, ಚಾಲಕ ಮತ್ತು ಕಂಡಕ್ಟರ್ ಬಸ್ ನಿಲ್ಲಿಸಲಿಲ್ಲ ಎಂದು ಯುವಕರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಹಿಗ್ಗಾ‌ಮುಗ್ಗಾ ಥಳಿಸಿದ್ದಾರೆ.

ಈ ಘಟನೆಯನ್ನು ಖಂಡಿಸಿ ಬಸ್ ಸಂಚಾರ ಸ್ಥಗಿತಗೊಳಿಸಿ ಸಾರಿಗೆ ನೌಕರರು ಬೈಲಹೊಂಗಲ ಪೋಲಿಸ್ ಠಾಣೆ ಮುಂದೆ ಧರಣಿ ಮಾಡಿದ್ದಾರೆ.‌ ವೃತ್ತಿ ಸುರಕ್ಷತೆ ನೀಡಿ ಎಂದು ನೌಕರರು ಆಗ್ರಹಿಸಿದ್ದಾರೆ.‌

ಇದನ್ನು ಖಂಡಿಸಿ ಬೇರೆ ಬೇರೆ ತಾಲೂಕಿನ ಸಾರಿಗೆ ಸಿಬ್ಬಂದಿ ಬೈಲಹೊಂಗಲ ಪೊಲೀಸ್ ಠಾಣೆ ಎದರು ಜಮಾವಣೆ ಆಗಿದ್ದಾರೆ.‌ ಇದರಿಂದ ಕೆಲ ಕಾಲ ಬಸ್ ಸಂಚಾರ ವ್ಯತಯವಾಗಿದೆ, ಪ್ರಯಾಣಿಕರು ಪರದಾಡಿದ್ದಾರೆ.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button