
ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಆರೋಗ್ಯ ಪೂರ್ಣವಾದ ಶರೀರದಲ್ಲಿ ಮಾತ್ರ ಆರೋಗ್ಯ ಪೂರ್ಣವಾದ ಮನಸ್ಸುಇರಲಿಕ್ಕೆ ಸಾಧ್ಯ. ಸ್ವಸ್ಥ ಮನಸ್ಸು ಹಾಗೂ ಶರೀರ ಸದಾಕಾಲ ಕ್ರೀಯಾಶೀಲವಾದಾಗ ಅವುಗಳಿಂದ ಏನೆಲ್ಲಾ ಸಾಧಿಸಬಹುದು. ಸಮಾಜದ ದಾನದಿಂದ ಸಂಪನ್ಮೂಲಗೊಂಡ ಮಠಗಳು ಸಮಾಜದ ಆರೋಗ್ಯವನ್ನು ಸರಿಪಡಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ಹೀರೆಮಠ ಶಹಾಪೂರದ ಸೂರಗೂರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಯಡುರ ಗ್ರಾಮದ ವೀರಭದ್ರ ದೇವಸ್ಥಾನದ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಗ್ರಾಮೀಣ ಭಾಗದಲ್ಲಿರುವ ಹಲವಾರು ಜನರಿಗೆ ಆರೋಗ್ಯದ ಯೋಗ್ಯ ಸೇವೆ ಹಾಗೂ ಆರೋಗ್ಯ ದೃಷ್ಟಿಯಿಂದ ಯೋಗ್ಯ ಸಲಹೆ ಮತ್ತು ಮಾರ್ಗದರ್ಶನ ದೊರಕದ ಕಾರಣ ಅವರು ತಮ್ಮ ಅಮೂಲ್ಯ ಜೀವನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಾಗಿ ಸಾಮಾಜಿಕ ಸಂಸ್ಥೆಗಳು, ಮಠಮಾನ್ಯಗಳು ಜಾತ್ರೆಯ ಸಂದರ್ಭದಲ್ಲಿ ಉಚಿತ ಆರೋಗ್ಯ ಸೇವೆಯನ್ನು ನಿಡುವ ಜೊತೆಗೆ ಬಡಜನರಿಗೆ ಸಹಕಾರಿಯಾಗಲಿದೆ ಎಂದು ಸ್ವಾಮೀಜಿಗಳು ಹೇಳಿದರು.
ಈ ವೇಳೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಎಸ್.ಎಸ್.ಗಡಾದ, ತಾಲೂಕಾ ವೈದ್ಯಾಧಿಕಾರಿ ಡಾ.ವ್ಹಿ.ವ್ಹಿ, ಶಿಂಧೆ, ಡಾ. ವಿವೇಕ ಹೊನ್ನಳ್ಳಿ, ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ವಿವಿಧ ಆಸ್ಪತ್ರೆಯ ವೇದ್ಯರಿಂದ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಯಿತು.
ಈ ವೇಳೆ ಡಾ|| ಎಸ್.ಕೆ.ಪಾಟೀಲ, ಚಿದಾನಂದ ಪಾಟೀಲ, ಡಾ|| ರೇಖಾಗೌರಾಜ ಹಾಗೂ ಇನ್ನಿತರ ವೈದ್ಯರು ಪಾಲ್ಗೊಂಡಿದ್ದರು. ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅಂಬಿಕಾನಗರ ಶಿವಾಚಾರ್ಯ ಸ್ವಾಮಿಜಿ , ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಜಿತರಾವ ದೇಸಾಯಿ, ಗ್ರಾಪಂಅಧ್ಯಕ್ಷ ಭೀಮಗೌಡಾ ಪಾಟೀಲ, ವಿಶಾಳಿ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಶ್ರಿಕಾಂತ ಉಮರಾಣೆ, ಮಲ್ಲಯ್ಯಾ ಶಾಸ್ತ್ರೀಜಡೆ, ಅಡವಯ್ಯ ಅರಳಿಕಟ್ಟಿಮಠ, ಡಾ|| ಪ್ರಭಾಕರ ಕೋರೆ ಕ್ರೇಡಿಟ್ ಸೌಹಾರ್ದ ಸಂಸ್ಥೆಯ ನಿರ್ದೆಶಕ ಸಿದಗೌಡಾ ಮಗದುಮ್ಮ, ನರಸಗೌಡ ಪಾಟೀಲ, ನರಸಗೌಡಕಮತೆ, ಶಿವಾನಂದ ಹಕಾರೆ, ಡಾ|| ಸುಕುಮಾರ ಚೌಗಲೆ, ಸಚಿನ ಪಾಟೀಲ, ರಾಜು ಪಾಟೀಲ, ರಾಜು ಹಕಾರೆ ಹಾಗೂ ಇನ್ನಿತರರು ಹಾಜರಿದ್ದರು.
ಈ ಆರೋಗ್ಯ ಶಿಬಿರದಲ್ಲಿ ಮುಂಜಾನೆ ೧೦ ರಿಂದ ಮಧ್ಯಾಹ್ನ ೩ ರವರೆಗೆ ನುರಿತ ವೈದ್ಯರಿಂದ ನೇತ್ರ, ಹೃದಯರೋಗ, ಮಧುಮೇಹ, ರಕ್ತತಪಾಸಣಾ, ಗಂಟಲು, ಮೂಗು, ಕಿವಿ, ಎಲುಬು, ಸ್ತ್ರೀರೋಗ ಹಾಗೂ ಗರ್ಭೀಣಿಯರಉಚಿತತಪಾಸಣೆ ಮಾಡಲಾಯಿತು.
ಗುರುವಾರ ವಿವಿಧ ಕಾರ್ಯಕ್ರಮ
ಗುರುವಾರ ದಿ ೨೩ ರಂದು ಸಾಯಂಕಾಲ ೬ ಗಂಟೆಗೆ ೧೧ ಲಕ್ಷ ಬಿಲ್ವಾರ್ಚನೆ ಹಾಗೂ ರುದ್ರಾಕ್ಷಾರ್ಚನೆ ಮಂಗಲ, ಉಚಿತ ಬಿಲ್ವ ಮತ್ತು ಬನ್ನಿ ಸಸಿಗಳ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರು ವಹಿಸಲಿದ್ದು ನೇತೃತ್ವವನ್ನು ವಿರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಕಟಖೋಳ, ಮಹಾದೇವ ಶಿವಾಚಾರ್ಯ ಸ್ವಾಮಿಗಳು ವಾಯಿ, ಅಭಿನವ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳು ಮಣಕವಾಡ, ಮಹಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ತೊರ್ಗಸೆ ಇವರು ವಹಿಸಲಿದ್ದಾರೆ.
ಸಮಾರಂಭದ ದೀಪ ಪ್ರಜ್ವಲನೆಯನ್ನು ಸೌದತ್ತಿ ಶಾಸಕ ಆನಂದ ಮಾಮನಿ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ವಹಿಸಲಿದ್ದು ಈ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ರಾಮದುರ್ಗ ಶಾಸಕ ಮಹಾದೇವಪ್ಪಾ ಯಾದವಾಡ, ಬೆಳಗಾವಿ ಜಿಲ್ಲಾಧಿಕಾರಿಎಸ್.ಬಿ.ಬೊಮನಹಳ್ಳಿ, ಚಿಕ್ಕೋಡಿಯ ಉಪವಿಭಾಗಾಧಿಖಾರಿರವೀಂದ್ರಕರಲಿಂಗನವರ, ಮಾಜಿ ಶಾಸಕ ಕಲ್ಲಪ್ಪಾ ಮಗೆಣ್ನವರ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ