Kannada NewsLatestNational

ಸಪ್ತಪದಿಯಂಥ ಆಚರಣೆಗಳಿಲ್ಲದ ಹಿಂದೂ ವಿವಾಹ ಅಸಿಂಧು

ಪ್ರಗತಿವಾಹಿನಿ ಸುದ್ದಿ, ಲಖ್ನೋ: ಸಪ್ತಪದಿ ತುಳಿಯದೆ ಹಾಗೂ ಇತರ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸದೆ ಆದ ಹಿಂದೂ ವಿವಾಹಕ್ಕೆ ಸಿಂಧುತ್ವವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಇದರೊಂದಿಗೆ ವ್ಯಕ್ತಿಯೊಬ್ಬ ತನ್ನ ಪತ್ನಿ ವಿಚ್ಛೇದನ ನೀಡದೆ ಪರ ಪುರುಷನೊಂದಿಗೆ ಶಾಸ್ತ್ರೋಕ್ತ ಮದುವೆ ಮಾಡಿಕೊಂಡಿದ್ದಾಗಿ ದಾಖಲಿಸಿದ್ದ ಪ್ರಕರಣವನ್ನು ಕೋರ್ಟ್ ವಜಾಗೊಳಿಸಿದೆ.

‘ಶಾಸ್ತ್ರೋಕ್ತ’ ಎಂಬ ಶಬ್ದಕ್ಕೂ ಮದುವೆಗೂ ಅವಿನಾಭಾವ ಸಂಬಂಧವಿದೆ. ಪರಂಪರಾಗತ ಸೂಕ್ತ ಆಚರಣೆಗಳೊಂದಿಗೆ ಮದುವೆಯನ್ನು ಆಚರಿಸುವುದನ್ನು ಇದು ಸೂಚಿಸುತ್ತದೆ. ಆದರೆ ಮದುವೆಯನ್ನು ಸಮರ್ಪಕ ಸಮಾರಂಭಗಳು ಹಾಗೂ ಪದ್ಧತಿಗಳೊಂದಿಗೆ ಮದುವೆ ಆಗಿರದಿದ್ದರೆ ಅದನ್ನು ಶಾಸ್ತ್ರೋಕ್ತ ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಮೃತಿ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯಪಟ್ಟಿದೆ.

ಸಪ್ತಪದಿ ತುಳಿಯುವುದು ಹಿಂದೂ ವಿವಾಹದಲ್ಲಿ ಅತಿ ಅಗತ್ಯದ ಪದ್ಧತಿ ಅದು ಇಲ್ಲದೆ ನಡೆಯುವ ಮದುವೆಯನ್ನು ಅಧಿಕೃತ ಎಂದು ಒಪ್ಪಿಕೊಳ್ಳಲಾಗದು ಎಂದು ಕೋರ್ಟ್ ಹೇಳಿದೆ.

Home add -Advt

ಸ್ಮೃತಿ ಸಿಂಗ್ ಮತ್ತು ಸತ್ಯಂ ಸಿಂಗ್ ಮದುವೆ 2017ರಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಆದರೆ ಅವರಿಬ್ಬರ ಸಂಬಂಧದಲ್ಲಿ ಹೊಂದಾಣಿಕೆಯಾಗದೆ ಗಂಡನ ಮನೆ ಬಿಟ್ಟು ಹೋದ ಸ್ಮೃತಿ, ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ತನಿಖೆ ಬಳಿಕ ಪೊಲೀಸರು ಸತ್ಯಂ ಸಿಂಗ್ ಹಾಗೂ ಆತನ ಮನೆಯವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

 2021ರ ಸೆ. 20ರಂದು ದೂರು ಸಲ್ಲಿಸಿದ್ದ ಸತ್ಯಂ, ತನಗ ವಿಚ್ಚೇದನ ನೀಡದೆ ಸ್ಮೃತಿ ಎರಡನೇ ಮದುವೆಯಾಗಿದ್ದಾಳೆ ಎಂದು ಆರೋಪಿಸಿದ್ದ. ಮಿರ್ಜಾಪುರ ಮ್ಯಾಜಿಸ್ಟ್ರೇಟ್ 2022ರ ಏಪ್ರಿಲ್ 21ರಂದು ಸ್ಮೃತಿಗೆ ಸಮನ್ಸ್ ಜಾರಿಗೊಳಿಸಿದ್ದರು. ಆದೇಶ ಹಾಗೂ ಇಡೀ ಪ್ರಕರಣದ ವಿಚಾರಣೆ ಪ್ರಶ್ನಿಸಿ ಸ್ಮೃತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Related Articles

Back to top button