ಯಡಿಯೂರಪ್ಪ ಲ್ಯಾಂಡಿಂಗ್ ವೇಳೆ ತಪ್ಪಿದ ಭಾರಿ ಅವಘಡ

ಪ್ರಗತಿವಾಹಿನಿ ಸುದ್ದಿ, ಜೀವರ್ಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವಾಸ ಮಾಡುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭಾರಿ ಅವಘಡವೊಂದು ಸ್ವಲ್ಪದರಲ್ಲಿ ತಪ್ಪಿದೆ.

ಗುಲ್ಬರ್ಗಾದ ಜೀವರ್ಗಿಯಲ್ಲಿ ಈ ಘಟನೆ ನಡೆಯಿತು. ಯಡಿಯೂರಪ್ಪ ಹೆಲಿಕಾಪ್ಟರ್ ಇನ್ನೇನು ಲ್ಯಾಂಡಿಂಗ್ ಆಗಬೇಕು ಎನ್ನುವ ಹೊತ್ತಿಗೆ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಿದ್ದರಿಂದ ಸುತ್ತಮುತ್ತಲಿನ ಪ್ಲ್ಯಾಸ್ಟಿಕ್ ಮತ್ತಿತರ ತ್ಯಾಜ್ಯಗಳೆಲ್ಲ ಹೆಲಿಪ್ಯಾಡ್ ನತ್ತ ಹಾರಿ ಬಂದವು. ಹೆಲಿಪ್ಯಾಡ್ ಕಾಣದ ಸ್ಥಿತಿ ಉಂಟಾಯಿತು. ಸುತ್ತಲಿದ್ದ ಪೊಲೀಸರಿಗೂ ಕಣ್ಣು ಕಾಣದಂತಾಯಿತು. ಎಲ್ಲರೂ ಕಕ್ಕಾಬಿಕ್ಕಿಯಾದರು.

ತಕ್ಷಣ ಎಚ್ಚೆತ್ತ ಪೈಲಟ್ ಹೆಲಿಕಾಪ್ಟರ್ ನ್ನು ಸ್ವಲ್ಪ ಹೊತ್ತು ಅತ್ತಿತ್ತ ಸುತ್ತಾಡಿಸಿದರು. ಗಾಳಿ ಕಡಿಮೆಯಾದ ನಂತರ ಅಲ್ಲಿದ್ದ ಪೊಲೀಸರು ಮತ್ತು ಇತರ ಸಿಬ್ಬಂದಿ ಪ್ಲ್ಯಾಸ್ಟಿಕ್ ಗಳನ್ನೆಲ್ಲ ಸ್ವಚ್ಛಗೊಳಿಸಿದರು.

ಪ್ಲ್ಯಾಸ್ಟಿಕ್ ಗಳೆಲ್ಲ ಹೆಲಿಕಾಪ್ಟರ್ ಫ್ಯಾನ್ ಗೆ ಸಿಲುಕಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಸ್ವಲ್ಪದರಲ್ಲೇ ಎಲ್ಲವೂ ತಪ್ಪಿತು.

ಮಾಡಾಳ ಬಂಧಿಸಿ

ನಂತರ ಮಾತನಾಡಿದ ಯಡಿಯೂರಪ್ಪ ಮಾಡಾಳ ವಿರೂಪಾಕ್ಷಪ್ಪನವರನ್ನು ತಕ್ಷಣ ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಬೇಕು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ನಾವು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವುದಿಲ್ಲ. ಈ ಪ್ರಕರಣದ ಕೂಲಂಕಷ ತನಿಖೆ ನಡೆಸಬೇಕು ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button