Latest

ಒಂದು ಕೆಜಿ ಡ್ರಗ್ಸ್ ಸಾಗಿಸಿ ಗಲ್ಲುಶಿಕ್ಷೆಗೆ ಗುರಿಯಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ, ಸಿಂಗಾಪುರ: ಒಂದಿಡೀ ದೇಶವನ್ನು ಅಸ್ಥಿರಗೊಳಿಸಲು ಅಲ್ಲಿನ ಯುವಜನರನ್ನು ಮಾದಕ ವ್ಯಸನಿಗಳಾಗಿಸಿದರೆ ಸಾಕು ಎಂಬ ಮಾತಿದೆ. ಅದರ ಪ್ರಯೋಗ ನೆರೆಯ ಕೆಲ ರಾಷ್ಟ್ರಗಳಿಂದ ಭಾರತದ ಮೇಲೆ ನಡೆಯುತ್ತಲೂ ಇದೆ. ಆದಾಗ್ಯೂ ನಮ್ಮಲ್ಲಿ ಕಾನೂನಿನ ಬಲಹೀನತೆ ಪರಿಣಾಮ ಅದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುತ್ತಿಲ್ಲ.

ಆದರೆ ಕೆಲ ದೇಶಗಳ ಪ್ರಬಲ, ಕಠಿಣ ಕಾನೂನು ಅದನ್ನು ಉಲ್ಲಂಘಿಸುವವರ ಪಾಲಿಗೆ ಹೇಗೆ ಮುಳುವಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಸಿಂಗಾಪುರ ನ್ಯಾಯಾಲಯದ ತೀರ್ಪೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಣ್ಣು ತೆರೆಸಿದೆ. ಕೇವಲ ಕೆಜಿ ಮಾದಕ ದೃವ್ಯ ಸಾಗಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆಗೆ ಗುರಿಪಡಿಸಿದೆ.

ತಂಗರಾಜು ಸುಪೈ (46) ಗಲ್ಲುಶಿಕ್ಷೆಗೆ ಗುರಿಯಾದವ. ಸಿಂಗಾಪುರ ನ್ಯಾಯಾಲಯದ ಈ ತೀರ್ಪಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕು ರಕ್ಷಣಾ ಸಂಸ್ಥೆಗಳು ಸೇರಿದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಕೂಡ ಇದಕ್ಕೆ ಆಕ್ಷೇಪಿಸಿದೆ. ಬರಿ ಒಂದು ಕೆಜಿ ಮಾದಕ ವಸ್ತು ಸಾಗಿಸಿದ್ದಕ್ಕೆ ಇಷ್ಟು ದೊಡ್ಡ ಪ್ರಮಾಣದ ಶಿಕ್ಷೆ ಸರಿಯಲ್ಲ ಎಂದು ಈ ಸಂಸ್ಥೆಗಳು ಪ್ರತಿಪಾದಿಸಿವೆ.

ಆದರೆ ಇದಾವುದಕ್ಕೂ ಸೊಪ್ಪು ಹಾಕದ ಸಿಂಗಾಪುರ ನ್ಯಾಯಾಲಯ ತನ್ನ ತೀರ್ಪನ್ನು ಕಾಯಂಗೊಳಿಸಿದೆ. ತಂಗರಾಜುವನ್ನು ಛಂಗಿ ಜೈಲಿನಲ್ಲಿ ಇಂದು ಗಲ್ಲಿಗೇರಿಸಲಾಗಿದೆ. 2017ರಲ್ಲಿ ತಂಗರಾಜು 1,017.9 ಗ್ರಾಂ ಗಾಂಜಾ ಸಾಗಣೆ ಮಾಡುತ್ತಿದ್ದಾಗ ಆತನನ್ನು ಬಂಧಿಸಲಾಗಿತ್ತು. ಕೋರ್ಟ್ ಈ ಕುರಿತು ಸುದೀರ್ಘ ವಿಚಾರಣೆ ನಡೆಸಿ ನಂತರ ಈ ಕಠಿಣ ತೀರ್ಪು ನೀಡಿತ್ತು. ತಂಗರಾಜು ಮರಣದಂಡನೆ ಪ್ರಮಾಣಕ್ಕೆ ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು ಪ್ರಮಾಣದ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಎಂದು ಕೋರ್ಟ್ ಸಮರ್ಥನೆ ನೀಡಿದೆ.

Home add -Advt

https://pragati.taskdun.com/gold-and-silver-prices-suddenly-rose-on-wednesday/
https://pragati.taskdun.com/yogi-adityanathroad-showmandyabjp/
https://pragati.taskdun.com/ramesh-jarakiholilakshmana-savadibelagavi/

Related Articles

Back to top button