Kannada NewsKarnataka News

ಚುನಾವಣೆಯ ಹೊತ್ತಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದೇನು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬುಧವಾರ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಖರ್ಗೆ ಅವರೊಂದಿಗೆ ಚುನಾವಣೆ ವಿಷಯವಾಗಿ ಸಿದ್ದರಾಮಯ್ಯ ಅವರು ಕೆಲಹೊತ್ತು ಮಾತುಕತೆ ನಡೆಸಿದರು.

ಇದಾದ ನಂತರ ಅಲ್ಲಿಗೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಹ ಸಿದ್ದರಾಮಯ್ಯ ನಗು ನಗುತ್ತ ಕುಶಲೋಪರಿ ವಿಚಾರಿಸಿದರು. ನಂತರ ಜೋರಾಗಿ ನಗುತ್ತ ಬೊಮ್ಮಾಯಿ ಅವರ ಭುಜದ ಮೇಲೆ ಸಿದ್ದರಾಮಯ್ಯ ಏಟು ನೀಡಿದರು. ಇಬ್ಬರೂ ಯಾವ ಜನ್ಮದ ಅನುಬಂಧವೋ ಎನ್ನುವಂತೆ ನಗು ನಗುತ್ತಲೇ ಮಾತನಾಡಿದರು.

ಮೈದಾನದಲ್ಲಿ ಕುಸ್ತಿ, ವಿಮಾನ ನಿಲ್ದಾಣದಲ್ಲಿ ದೋಸ್ತಿ ಎನ್ನುವಂತಿತ್ತು ಈ ಸನ್ನಿವೇಶ.

https://pragati.taskdun.com/cm-basavaraj-bommaisiddaramaiahbelagavi-airport/

Related Articles

Back to top button